ಉಪಚುನಾವಣೆ: ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸಕಲ ಸಿದ್ಧತೆ

Update: 2019-12-03 17:52 GMT

ಬೆಂಗಳೂರು, ಡಿ.3: ಡಿ.5ರಂದು ನಡೆಯಲಿರುವ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯ ಕೆ.ಆರ್.ಪುರಂ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 56 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಡಿ.5ರಂದು ಬೆಳಗ್ಗೆ 7ರಿಂದ ಸಂಜೆ 6:30ರವರೆಗೆ ಮತದಾನ ನಡೆಯಲಿದೆ. ಕೆ.ಆರ್.ಪುರ: ಐಟಿಐ ವಿದ್ಯಾಮಂದಿರ, ಯಶವಂತಪುರ: ಆರ್.ವಿ ಇಂಜಿನಿಯರಿಂಗ್ ಕಾಲೇಜು, ಮಹಾಲಕ್ಷ್ಮೀ ಲೇಔಟ್: ವಿಧ್ಯಾವರ್ಧಕ ಸಂಘ ಹೈಸ್ಕೂಲ್, ಶಿವಾಜಿನಗರ: ಮೌಂಟ್ ಕಾರ್ಮಲ್ ಪಿ.ಯು. ಕಾಲೇಜ್‌ಗಳಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳಿವೆ. 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,361 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 12 ಸಖಿ ಮತಗಟ್ಟೆ ಹಾಗೂ 4 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆ ಅಧಿಕಾರಿಗಳ ಅನುಕೂಲಕ್ಕಾಗಿ ಪ್ರತಿ ಮತಗಟ್ಟೆಗಳಲ್ಲೂ ಮೆಡಿಕಲ್ ಕಿಟ್‌ಅನ್ನು ನೀಡಲಾಗಿದೆ.

ಮತದಾನಕ್ಕೆ ಅಗತ್ಯವಿರುವ ಪಿಆರ್‌ಒ, ಎಪಿಆರ್‌ಒ ಮತ್ತು ಪೊಲೀಂಗ್ ಅಧಿಕಾರಿಗಳು ಸೇರಿ ಒಟ್ಟು 5,988 ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದ್ದು, ಚುನಾವಣೆಗೆ 536 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ.

ಎಣಿಕೆ ಕೇಂದ್ರಗಳು: ಕೆ.ಆರ್.ಪುರ: ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಯಶವಂತಪುರ: ಆರ್.ವಿ. ಇಂಜಿನಿಯರಿಂಗ್ ಕಾಲೇಜ್, ಮಹಾಲಕ್ಷ್ಮೀ ಲೇಔಟ್: ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಶಿವಾಜಿನಗರ: ಮೌಂಟ್ ಕಾರ್ಮಲ್ ಪಿ.ಯು. ಕಾಲೇಜ್.

160 ಎಫ್‌ಐಆರ್: ಉಪಚುನಾವಣೆ ಸಂಬಂಧ ನೀತಿ ಸಂತೆ ಜಾರಿಯಿದ್ದ ವೇಳೆ ಎಸ್‌ಎಸ್‌ಟಿ ತಂಡವು ಇದುವರೆಗೆ 65,537 ವಾಹನಗಳನ್ನು ತಪಾಸಣೆ ನಡೆಸಿದೆ. ಇದರಲ್ಲಿ 31,15 ಲಕ್ಷ ರೂ. ನಗದು ಹಾಗೂ 2.23 ಕೋಟಿ ರೂ. ವೆಚ್ಚದ 37 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಮತ್ತು 212 ದೂರು ಹಾಗೂ 160 ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News