ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಐದು ಲಕ್ಷ ಟೋಕನ್ ಖರೀದಿಗೆ ಮುಂದಾದ ನಮ್ಮ ಮೆಟ್ರೋ

Update: 2019-12-03 18:02 GMT

ಬೆಂಗಳೂರು, ಡಿ.3: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಐದು ಲಕ್ಷ ಟೋಕನ್‌ಗಳ ಖರೀದಿಗೆ ಬಿಎಂಆರ್‌ಸಿಎಲ್ ಮುಂದಾಗಿದೆ.

ಮೆಟ್ರೋ ರೈಲಿನಲ್ಲಿ ದಿನದಿಂದ ದಿನಕ್ಕೆ ಸಂಚರಿಸುವವರ ಸಂಖ್ಯೆ ಅಧಿಕವಾಗಿದೆ. 2019 ರ ಆರಂಭದಲ್ಲಿ ಸ್ಮಾರ್ಟ್ ಬಳಕೆ ಹೆಚ್ಚಿತ್ತು. ಜತೆಗೆ ಟೋಕನ್ ಖರೀದಿಸಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಇಳಿಕೆಯಾಗಿತು. ಆದರೆ, ಇದೀಗ ಟೋಕನ್‌ಗಳ ಬಳಕೆದಾರರೇ ಅಧಿಕವಾಗಿದ್ದಾರೆ.

ಪ್ರತಿ ತಿಂಗಳ ಒಟ್ಟು ಪ್ರಯಾಣಿಕರಲ್ಲಿ ಶೇ.62 ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಿದ್ದರು. ಶೇ.38 ರಷ್ಟು ಮಂದಿ ಟೋಕನ್ ಖರೀದಿ ಮಾಡಿ ಪ್ರಯಾಣಿಸುತ್ತಿದ್ದರು. ಬಿಎಂಆರ್‌ಸಿಎಲ್‌ಗೆ ಬಂದ ಆದಾಯದಲ್ಲಿ ಶೇ.59.46 ರಷ್ಟು ಸ್ಮಾರ್ಟ್ ಕಾರ್ಡ್ ಬಳಕೆದಾರರಿಂದ ಹಾಗೂ ಶೇ.40.56 ರಷ್ಟು ಆದಾಯ ಟೋಕನ್ ಬಳಕೆದಾರ ಪ್ರಯಾಣಿಕರದ್ದಾಗಿದೆ. ಹೀಗಾಗಿ, ಎಲ್ಲೆಡೆ ಆರು ಬೋಗಿಗಳ ರೈಲು ಸಂಚಾರ ಮಾಡುತ್ತಿದ್ದು, ಟೋಕನ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News