ಅನರ್ಹ ಶಾಸಕರನ್ನು ಸೋಲಿಸಲು ಪ್ರಗತಿಪರ ಪಕ್ಷಗಳ ಮತ್ತು ಸಂಘಟನೆಗಳ ಒಕ್ಕೂಟ ಮನವಿ

Update: 2019-12-04 16:59 GMT

ಬೆಂಗಳೂರು, ಡಿ.4: ರಾಜ್ಯದಲ್ಲಿ ಡಿ.5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಅನರ್ಹ ಶಾಸಕರನ್ನು ಸೋಲಿಸಬೇಕು ಎಂದು ಪ್ರಗತಿಪರ ಪಕ್ಷಗಳ ಮತ್ತು ಸಂಘಟನೆಗಳ ಒಕ್ಕೂಟ ಮತದಾರರಲ್ಲಿ ಮನವಿ ಮಾಡಿದೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವರಾಜ್ ಇಂಡಿಯಾ, ರಾಜ್ಯ ರೈತ ಸಂಘದ ವೀರಸಂಗಯ್ಯ, ಅನರ್ಹ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್-ಜೆಡಿಎಸ್‌ಗೆ ಮೋಸ ಮಾಡಿ ಬಿಜೆಪಿ ಸೇರಿದ್ದಾರೆ. ಅವರ ಉದ್ದೇಶ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಲ್ಲ. ಆದ್ದರಿಂದ ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ನಾಡಿನ ಜನತೆ ಸೋಲಿಸಬೇಕು ಎಂದು ಅವರು ಮನವಿ ಮಾಡಿದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಅವರು 'ಶಾಸಕರನ್ನು ಖರೀದಿ ಮಾಡದೆ ಇರಲು ಮೊದಲೇ ನಿರ್ಧರಿಸಿದ್ದೆವು. ಎನ್‌ಸಿಪಿ ಬೆಂಬಲ ಪಡೆದು ಸರಕಾರ ರಚಿಸಿದ್ದೆವು. ಆನಂತರ ಅಜಿತ್ ಪವಾರ್ ಬೆಂಬಲ ನೀಡಲಿಲ್ಲ. ಸರಕಾರ ರಚಿಸಲು ಆಗಲಿಲ್ಲ' ಎಂದು ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಏನು? ಶಾಸಕರು ಎಂದರೆ ಖರೀದಿ ವಸ್ತುಗಳು ಅಂತಾ ತಾನೆ. ಬಿಜೆಪಿ ಈ ರೀತಿಯಾಗಿ ಜನತಂತ್ರ ವ್ಯವಸ್ಥೆಯನ್ನು ಕೆಡಿಸಿದ್ದಾರೆ. ಆದ್ದರಿಂದ ಮತದಾರರು ಅನರ್ಹ ಶಾಸಕರನ್ನು ಬೆಂಬಲಿಸಬಾರದು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News