ವಂಚಕ ಕಂಪೆನಿಗಳ ಆಸ್ತಿ ಜಪ್ತಿಗೆ ಅಧಿಕಾರಿಗಳ ನೇಮಕ ಸ್ವಾಗತಾರ್ಹ: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ

Update: 2019-12-04 17:00 GMT

ಬೆಂಗಳೂರು, ಡಿ.4: ಸಾರ್ವಜನಿಕರಿಂದ ಬಂಡವಾಳ ರೂಪದಲ್ಲಿ ಹಣ ವಸೂಲಿ ಮಾಡಿ, ವಂಚಿಸಿರುವ ಕಂಪೆನಿಗಳ ಆಸ್ತಿ ಜಪ್ತಿಗೆ ಸರಕಾರ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಶೀಘ್ರದಲ್ಲಿಯೇ ನೊಂದವರಿಗೆ ನ್ಯಾಯ ದೊರೆಯಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರನ್ನು ವಂಚಿಸುವ ಅನೇಕ ಕಂಪೆನಿಗಳು ನಾಯಿಕೊಡೆಗಳಂತೆ ಹರಡಿಕೊಂಡಿವೆ. ರಾಜಧಾನಿ ಬೆಂಗಳೂರಿನಲ್ಲಿಯೇ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದುವರೆಗೂ 24ಕ್ಕೂ ಹೆಚ್ಚು ಕಂಪೆನಿಗಳು ತಮ್ಮ ಗ್ರಾಹಕರನ್ನು ವಂಚನೆ ಮಾಡಿವೆ.

ಈ ಬಗ್ಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಹೋರಾಟ ಕೈಗೊಂಡಿತ್ತು. ಅಷ್ಟೇ ಅಲ್ಲದೆ, ಗ್ರಾಹಕರ ಪರವಾಗಿ ನ್ಯಾಯಾಲಯಗಳಲ್ಲೂ ಹೋರಾಟ ನಡೆಸುತ್ತಿದ್ದು, ಇದೀಗ ಸರಕಾರ ವಂಚಿಸಿರುವ ಕಂಪೆನಿಗಳ ಆಸ್ತಿ ಜಪ್ತಿ ಮಾಡುವಂತೆ ಆದೇಶಿಸಿದೆ. ಇದರಿಂದ ನೊಂದವರಿಗೆ ಶೀಘ್ರದಲ್ಲಿಯೇ ನ್ಯಾಯ ದೊರೆಯುವ ವಿಶ್ವಾಸ ಇದೆ ಎಂದು ವೇದಿಕೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News