ಎಬಿವಿಪಿ ರಾಷ್ಟ್ರೀಯ ಪಧಾದಿಕಾರಿಗಳ ನೇಮಕ
ಬೆಂಗಳೂರು, ಡಿ.4: ಇತ್ತೀಚೆಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಎಬಿವಿಪಿಯ 65ನೇ ರಾಷ್ಟ್ರೀಯ ಅಧಿವೇಶನದಲ್ಲಿ ನೂತನ ಪದಾಧಿಕಾರಿಗಳ ಚುನಾವಣೆ ನಡೆದು, ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಚೆನ್ನೈನ ಡಾ. ಸುಬ್ಬಯ್ಯ ಅವರನ್ನು ನೇಮಕ ಮಾಡಲಾಯಿತು ಎಂದು ಸಂಘಟನೆಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಧಿ ತ್ರಿಪಾಠಿ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಅಶೀಶ್ ಚೌಹಾಣ್ ನೇಮಕಗೊಂಡಿದ್ದಾರೆ ಮತ್ತು ಪ್ರೊ. ಯಶವಂತರಾವ್ ಕೇಳ್ಕರ್ ಹೆಸರಿನಲ್ಲಿ ಪ್ರತಿ ವರ್ಷ ನೀಡುವ ಎಬಿವಿಪಿಯ ಯುವ ಪುರಸ್ಕಾರ್ ಅನ್ನು ಮಹಾರಾಷ್ಟ್ರಾದ ಸಮಾಜ ಸೇವಕ ಸಾಗರ ರೆಡ್ಡಿ ಅವರಿಗೆ ನೀಡಲಾಯಿತು ಎಂದು ತಿಳಿಸಿದರು.
ಈ ಅಧಿವೇಶನದಲ್ಲಿ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ 100 ವರ್ಷಗಳ ಸ್ಮರಣೆಯಲ್ಲಿ ದೇಶಾದ್ಯಂತ ಕಾರ್ಯಕ್ರಮ ರೂಪಿಸುವ ಕರೆ ನೀಡಲಾಯಿತು ಮತ್ತು ಹಲವು ನಿರ್ಣಯ ಕೈಗೊಳ್ಳಲಾಯಿತು. ಅದರಲ್ಲಿ ದೇಶದ ಪ್ರಸ್ತುತ ರಾಜ್ಯ ವಿಶ್ವವಿದ್ಯಾಲಯಗಳ ಸ್ಥಿತಿಗತಿ, 370ನೇ ವಿಧಿ ರದ್ದು ಕುರಿತು ಚರ್ಚೆ ನಡೆಸಿ ನಿರ್ಣಯಗಳನ್ನು ಅಂಗೀಕರಿಸಲಾಯಿತು ಎಂದು ತಿಳಿಸಿದರು.