ಜಿಡಿಪಿ ಬೆಳವಣಿಗೆ ದರವನ್ನು ಶೇ.6.1ರಿಂದ ಶೇ.5ಕ್ಕೆ ಇಳಿಸಿದ ಆರ್ ಬಿಐ

Update: 2019-12-05 08:22 GMT

ಹೊಸದಿಲ್ಲಿ, ಡಿ.5: ಬ್ಯಾಂಕರ್ ಗಳು ಮತ್ತು ಅರ್ಥ ಶಾಸ್ತ್ರಜ್ಞರ ನಿರೀಕ್ಷೆ ಸುಳ್ಳಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್  ​ರೆಪೋ  ಮತ್ತು ರಿವರ್ಸ್ ​ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ​ರೆಪೋ  ದರ ಶೇ 5.15 ಮತ್ತು ರಿವರ್ಸ್ ​ರೆಪೋ  ದರ ಶೇ  4.90ನ್ನು ಯಾವುದೇ ಬದಲಾವಣೆ ಮಾಡದೆ ಮುಂದುವರಿಸಲು ನಿರ್ಧರಿಸಿದೆ.

ಈ ವರ್ಷ ಸತತ ಐದು ಬಡ್ಡಿದರಗಳ ಕಡಿತದ ನಂತರ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಪ್ರಮುಖ ​ರೆಪೋ ದರವನ್ನು  ಮತ್ತು ರಿವರ್ಸ್ ​ರೆಪೋ  ದರವನ್ನು  ಹಿಡಿದಿಡಲು  ಸರ್ವಾನುಮತದ ನಿರ್ಧಾರ ಕೈಗೊಂಡಿದೆ.

ನಿಧಾನಗತಿಯ ಆರ್ಥಿಕತೆಯನ್ನು ಬೆಂಬಲಿಸಲು ಕೇಂದ್ರ ಬ್ಯಾಂಕ್ ಆರನೇ ಬಾರಿಗೆ ​ರೆಪೋ ದರವನ್ನು ಕಡಿತಗೊಳಿಸುತ್ತದೆ ಎಂದು ಬ್ಯಾಂಕರ್‌ಗಳು ಮತ್ತು ಅರ್ಥಶಾಸ್ತ್ರಜ್ಞರು ವ್ಯಾಪಕವಾಗಿ ನಿರೀಕ್ಷಿಸಿದ್ದರು, ಅದರ  ಬೆಳವಣಿಗೆಯ ದರವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರು ವರ್ಷಗಳಲ್ಲೇ  ಕನಿಷ್ಠ 4.5 ಶೇಕಡಾಕ್ಕೆ ಇಳಿದಿದೆ.

2019-20ರ ಆರ್ಥಿಕ ವರ್ಷಕ್ಕೆ (ಎಪ್ರಿಲ್‌ನಿಂದ ಮಾರ್ಚ್‌ವರೆಗೆ) ತನ್ನ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡ 5 ಕ್ಕೆ ಕಡಿತಗೊಳಿಸಿದೆ. ಅಕ್ಟೋಬರ್‌ನಲ್ಲಿ ಹಣದುಬ್ಬರವು ಮೊದಲ ಬಾರಿಗೆ ಆರ್‌ಬಿಐನ 4 ಶೇಕಡಾ ಮಧ್ಯಮ ಅವಧಿಯ ಗುರಿಯನ್ನು ಉಲ್ಲಂಘಿಸಿದೆ. ಇದಕ್ಕೆ ಮುಖ್ಯವಾಗಿ ಈರುಳ್ಳಿ ಮತ್ತು ಟೊಮೆಟೊದಂತಹ ತರಕಾರಿಗಳ ಬೆಲೆ ಏರಿಕೆಯಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News