ಬೆಂಗಳೂರು: ಮರ್ಸಿಡಿಸ್ ಬೆಂಝ್‌ ನೂತನ ಎಸ್‌ಯುವಿಜಿಎಲ್‌ಸಿ ಬಿಡುಗಡೆ

Update: 2019-12-06 17:53 GMT

ಬೆಂಗಳೂರು, ಡಿ.5: ಮರ್ಸಿಡಿಸ್ ಬೆಂಝ್ ಕಾರುಗಳ ಅಧಿಕೃತ ಡೀಲರ್ ಸುಂದರಂ ಮೋಟರ್ಸ್ ಬೆಂಳೂರಿನ ಕಸ್ತೂರ ಬಾ ರಸ್ತೆಯಲ್ಲಿರುವ ಶೋರೂಮ್‌ನಲ್ಲಿ ಶುಕ್ರವಾರ ನೂತನ ವಿಲಾಸಿ ಎಸ್‌ಯುವಿಜಿಎಲ್‌ಸಿಯನ್ನು ಅನಾವರಣೊಳಿಸಿತು.

ಈ ನೂತನ ಎಸ್‌ಯುವಿಯಲ್ಲಿ ವಿಲಾಸಿ ವಾಹನಗಳ ವಿಭಾಗದಲ್ಲೇ ಅತ್ಯಂತ ಆಧುನಿಕ ಹಾಗೂ ಕ್ರಾಂತಿಕಾರಿ ಸೌಲಭ್ಯಗಳಿವೆ ಎಂದು ಸುಂದರಂ ಮೋಟರ್ಸ್ ಪ್ರಕಟನೆಯಲ್ಲಿ ತಿಳಿಸಿದೆ. ದೇಶದಲ್ಲೇ ಎನ್‌ಟಿಜಿ6 ಟೆಲಿಮ್ಯಾಟಿಕ್ಸ್ ನೊಂದಿಗೆ ಬಂದಿರುವ ಪ್ರಪ್ರಥಮ ಮರ್ಸಿಡಿಸ್ ಬೆಂಝ್ ವಾಹನ ಇದಾಗಿದ್ದು ನೂತನ ಬಿಎಸ್ 6 ಇಂಜಿನ್ ಇದರಲ್ಲಿದೆ. ನೂತನ ಅತ್ಯಾಧುನಿಕ ಇನ್ಫೊಟೆನ್‌ಮೆಂಟ್ ಎಂಬಿಯುಎಕ್ಸ್ ಈ ವಾಹನದ ವಿಶೇಷತೆ. ಅತ್ಯಾಕರ್ಷಕ ವಿನ್ಯಾಸ, ಉತ್ಕ್ರಷ್ಟ ತಾಂತ್ರಿಕತೆ ಹಾಗೂ ಕನೆಕ್ಟಿವಿಟಿ ಇತ್ಯಾದಿ ಹಲವು ಇತರ ವಿಶೇಷತೆಗಳು ಜಿಎಲ್‌ಸಿಯಲ್ಲಿವೆ ಎಂದು ಪ್ರಕಟನೆ ತಿಳಿಸಿದೆ.

ವಿಲಾಸಿ ಹಾಗೂ ಅತ್ಯಂತ ವೇಗವಾಗಿ ಚಲಾಯಿಸುವಂತಹ ಕಾರುಗಳನ್ನು ಇಷ್ಟಪಡುವ ನಗರವಾಸಿಗಳಿಗೆಂದೇ ವಿಶೇಷವಾಗಿ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. what3words ಎಂಬ ವಿನೂತನ ಲೊಕೇಶನ್ ಟೆಕ್ನಾಲಜಿ ಈ ವಾಹನದಲ್ಲಿದ್ದು ಅದು cಲಾಯಿಸುವವರಿಗೆ ತಮ್ಮ ಗುರಿ ತಲುಪಲು ಬಹಳ ಸಹಕಾರಿಯಾಗಲಿದೆ.

ಮರ್ಸಿಡಿಸ್ ಬೆಂಝ್ ಸದಾ ಗ್ರಾಹಕ ಕೇಂದ್ರಿತ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಅತ್ಯುತ್ತಮ ಡ್ರೈವಿಂಗ್ ಅನುಭವ ನೀಡುವುದು ಬೆಂಝ್ ವಿಶೇಷತೆ. ಇದೇ ನಿಟ್ಟಿನಲ್ಲಿ ಇದೀಗ ಎಂಬಿಯುಕ್ಸ್ ತಂತ್ರಾನದೊಂದಿಗೆ ಹೊಸ ಜಿಎಲ್‌ಸಿ ಬಂದಿದೆ. ಎಸ್‌ಯುವಿ ವಾಹನದ ವೇಗ ಹಾಗೂ ಒರಟುತನದ ಜೊತೆ ಅತ್ಯಾಧುನಿ ತಂತ್ರಜ್ಞಾನ ಈ ವಾಹನದಲ್ಲಿದ್ದು, ಖಂಡಿತ ಗ್ರಾಹಕರ ಮನಗೆಲ್ಲಲಿದೆ ಎಂದು ಟಿವಿಎಸ್ ಸುಂದರಂ ಮೋಟರ್ಸ್ ಬ್ರಾಂಡ್ ಸಿಇಒ ಎಸ್.ಎಸ್.ರಾಮ ಸುಬ್ರಮಣ್ಯಂ ಪ್ರಟನೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ 9148155175 ಅನ್ನು ಸಂಪರ್ಕಿಸಲು  ಕೋರಲಾಗಿದೆ

ಈ ಕಾರಿನೊಳಗೆ ಮರು ವಿನ್ಯಾಸೊಳಿಸಿದ ಎಲ್ಇಡಿ ಹೆಡ್ ಲ್ಯಾಂಪ್, ಅಲಾಯ್ ವೀಲ್ಸ್, ಇನ್‌ಫೊಟೈನ್ಮೆಂಟ್ ಸಿಸ್ಟಮ್ 10.25 ಇಂಚು ಟಚ್ ಸ್ಟ್ರೀನ್ ಇದೆ. ಅಷ್ಟೇ ಅಲ್ಲದೆ ‘ಹೇಯ್ ಮರ್ಸಿಡಿಸ್’ ಎಂದರೆ ಪ್ರತಿಕ್ರಿಯಿಸುವ ವಾಯ್ಸಿ ಕಮಾಂಡ್ ವ್ಯವಸ್ಥೆ, 64 ಬಣ್ಣಗಳ ಆಂಬಿಯೆನ್ಸ್ ಲೈಟಿಂಗ್ (ಒಳಗಿನ ಬೆಳಕಿನ ವಾತಾವರಣ), ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಸೇರಿ ಹಲವು ವಿಶೇಷತೆಳನ್ನು ಒಳೊಂಡಿದೆ

-ಎಸ್.ಎಸ್.ರಾಮ ಸುಬ್ರಮಣ್ಯಂ, ಟಿವಿಎಸ್ ಸುಂದರಂ ಮೋಟರ್ಸ್ ಬ್ರಾಂಡ್ ಸಿಇಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News