ಕೆಎಸ್ಸಾರ್ಟಿಸಿ: ಪ್ಲಾಸ್ಟಿಕ್ ಬಾಟಲ್ ಕ್ರಷ್ ಯಂತ್ರಕ್ಕೆ ಚಾಲನೆ

Update: 2019-12-06 17:20 GMT

ಬೆಂಗಳೂರು, ಡಿ.6: ಕೆಂಪೇಗೌಡ ಬಸ್ ನಿಲ್ದಾಣ(ಕೆಎಸ್ಸಾರ್ಟಿಸಿ)ದಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಷ್ ಮಾಡಿ ಮರು ಬಳಕೆ ಮಾಡುವ ಯಂತ್ರಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಚಾಲನೆ ನೀಡಿದರು.

ಈ ಯಂತ್ರವು ಪ್ರತಿ ದಿನ ಕನಿಷ್ಠ 4500 ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಷ್ ಮಾಡಲಿದ್ದು, ಒಂದು ವರ್ಷಕ್ಕೆ 17.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಇದರಿಂದ ಮರುಬಳಕೆ ಆಗಲಿದೆ. ರಸ್ತೆ , ಶೌಚಾಲಯದ ಕ್ಯಾಬಿನ್, ಕಸದ ಬುಟ್ಟಿಗಳು, ದಿನಚರಿ ಪುಸ್ತಕ, ಟಿ- ಶರ್ಟ್‌ಗಳನ್ನು ತಯಾರಿಸಲಾಗುತ್ತದೆ ಎಂದು ಶಿವಯೋಗಿ ಕಳಸದ ಹೇಳಿದರು.

ಸದರಿ ಯಂತ್ರವು 4.3 ಲಕ್ಷವಾಗಿದ್ದು, ಗ್ರೀನ್ ಸೈಕ್ಲೋ ಪಾಸ್ಟ್ ಮತ್ತು ಸ್ಪರ್ಶ ಮಸಾಲಾರ ಸಾಮಾಜಿಕ ಹೊಣೆಗಾರಿಕೆಯಡಿ ಕಾರ್ಯಗತಗೊಳಿಸಲಾಗಿದೆ. ನಿಗಮವು ಉಚಿತ ಸ್ಥಳಾವಕಾಶ ಮತ್ತು ವಿದ್ಯುತ್ ವೆಚ್ಚವನ್ನು ಭರಿಸಲಿದೆ. ನಿಗಮವು ಪರಿಸರ ಸ್ನೇಹಿ ಕಾರ್ಯಕ್ರಮಗಳ ಅಡಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಿರ್ದೇಶಕಿ(ಸಿಬ್ಬಂದಿ ಪರಿಸರ) ಕವಿತಾ ಎಸ್.ಮನ್ನಿಕೇರಿ, ಗ್ರೀನ್ ಸೈಕ್ಲೋಪಾಸ್ಟ್‌ನ ನಿರ್ದೇಶಕರುಗಲಾದ ರಘುರಾಮ್, ಜಾನ್ ಡಿಸೋಜಾ, ರಂಗಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News