ಸಂಶೋಧನೆಗೆ ಮೆದುಳು ದಾನ ಮಾಡಲು ನ್ಯೂಝಿಲ್ಯಾಂಡ್ ಮಾಜಿ ರಗ್ಬಿ ಆಟಗಾರರಲ್ಲಿ ಮನವಿ

Update: 2019-12-06 18:09 GMT

ವೆಲ್ಲಿಂಗ್ಟನ್, ಡಿ.6: ಸಂಶೋಧನೆಗಾಗಿ ತಮ್ಮ ಮೆದುಳನ್ನು ದಾನ ಮಾಡುವಂತೆ ನ್ಯೂಝಿಲ್ಯಾಂಡ್‌ನ ಮಾಜಿ ರಗ್ಬಿ ಆಟಗಾರರಿಗೆ ಆಕ್ಲಂಡ್ ಯುನಿವರ್ಸಿಟಿಯ ಮೆದುಳು ಸಂಶೋಧನಾ ಕೇಂದ್ರ ವಿನಂತಿಸಿಕೊಂಡಿದೆ. ತಲೆಗೆ ಆಗಿರುವ ಗಾಯ ಹಾಗೂ ಜಜ್ಜುವಿಕೆಯಿಂದ ಆಗಿರುವ ಪರಿಣಾಮವನ್ನು ತಿಳಿದುಕೊಳ್ಳುವ ಉದ್ದೇಶದಿಂದ ರಗ್ಬಿ, ಫುಟ್ಬಾಲ್ ಹಾಗೂ ಬಾಕ್ಸಿಂಗ್‌ನಂತಹ ಕ್ರೀಡೆಗಳಲ್ಲಿ ಆಡುವ ಕ್ರೀಡಾಪಟುಗಳಿಂದ ಮೆದುಳನ್ನು ದಾನ ಮಾಡುವಂತೆ ವಿನಂತಿಸಿದ್ದೇವೆ. ಈ ಕುರಿತಂತೆ ಶುಕ್ರವಾರ ಉಪಕ್ರಮವನ್ನು ಆರಂಭಿಸಲಾಗಿದೆ ಎಂದು ಮೆದುಳು ಸಂಶೋಧನಾ ಕೇಂದ್ರ(ಸಿಬಿಆರ್)ತಿಳಿಸಿದೆ. ನ್ಯೂಝಿಲ್ಯಾಂಡ್‌ನಲ್ಲಿ ಕ್ರೀಡೆಗಳಲ್ಲಿ ತಲೆಗೆ ಗಾಯವಾಗುವುದು ಅತ್ಯಂತ ಮುಖ್ಯ ಸಮಸ್ಯೆಯಾಗಿದ್ದು, ದೇಶದಲ್ಲಿ ಫುಟ್ಬಾಲ್, ರಗ್ಬಿಯಂತಹ ದೈಹಿಕ ಶ್ರಮಬಯಸುವ ಕ್ರೀಡೆಗಳಲ್ಲಿ ಶೇ.20ರಷ್ಟು ಪ್ರಮಾಣದಲ್ಲಿ ಮೆದುಳು ಗಾಯದ ಸಮಸ್ಯೆ ಕಂಡುಬರುತ್ತಿದೆ. ಕಳೆದ ವರ್ಷ 9,000ಕ್ಕೂ ಅಧಿಕ ತಲೆಗೆ ಜಜ್ಜಿದ ಸಮಸ್ಯೆ ವರದಿಯಾಗಿದ್ದು, ಇದರಲ್ಲಿ 19 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News