ಮಾದಕ ವಸ್ತು ಮಾರಾಟ ಆರೋಪ: ನಾಲ್ವರ ಬಂಧನ

Update: 2019-12-07 15:34 GMT

ಬೆಂಗಳೂರು, ಡಿ.7: ಮಾದಕ ವಸ್ತು ಮಾರಾಟ ಆರೋಪದಡಿ ನಾಲ್ವರನ್ನು ಇಲ್ಲಿನ ಶಿವಾಜಿನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಣಿಪುರ ಮೂಲದ ಮಝಾಮ್ ದಾರ್(28), ಅಲೀಂ, ಜೇಮ್ಸ್, ಫಾರೂಕ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ

ಆರೋಪಿಗಳು ಶಿವಾಜಿನಗರದ ಚಾರ್ ಮಿನಾರ್ ರಸ್ತೆ 6ನೆ ಬೀದಿಯ ಮನೆಯಲ್ಲಿ ಮಾದಕ ವಸ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 2 ಲಕ್ಷದ 20 ಸಾವಿರ ಮೌಲ್ಯದ, 22 ಗ್ರಾಂ ತೂಕದ ಹೆರಾಯಿನ್ ಅನ್ನು ವಶ ಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News