ಬದಲಾಗುತ್ತಿರುವ ಹವಾಮಾನ: ಹಾಪ್‌ಕಾಮ್ಸ್‌ಗೆ ಮಾರಾಟದ ಮೇಲೆ ಪರಿಣಾಮ

Update: 2019-12-07 17:49 GMT

ಬೆಂಗಳೂರು, ಡಿ.7: ಬದಲಾಗುತ್ತಿರುವ ಹವಾಮಾನದ ಪರಿಣಾಮ ಹಾಪ್‌ಕಾಮ್ಸ್‌ಗಳಲ್ಲಿನ ಹಣ್ಣು ಮತ್ತು ತರಕಾರಿ ಮಾರಾಟದ ಮೇಲೆ ಪರಿಣಾಮ ಬೀರಿದೆ.

ಹಾಪ್‌ಕಾಮ್ಸ್‌ನಲ್ಲಿ ಸಾಮಾನ್ಯ ದಿನಗಳಲ್ಲಿ ಸುಮಾರು 80 ಟನ್ ಹಣ್ಣು ಮತ್ತು ತರಕಾರಿಗಳು ಮಾರಾಟವಾಗುತ್ತದೆ. ಆದರೆ ಆ ಮಾರಾಟ ಪ್ರಮಾಣ ಇದೀಗ 50ರಿಂದ 52 ಟನ್‌ಗೆ ಬಂದು ನಿಂತಿದೆ. ನಗರದಲ್ಲಿ ಕಳೆದೆರಡು ದಿನಗಳಿಂದ ವಾತಾವರಣದಲ್ಲಿ ಬದಲಾವಣೆ ಆಗುತ್ತಲೇ ಇದೆ. ಮೋಡ ಮುಸುಕಿದ ವಾತಾವರಣದ ಜತೆಗೆ ಶೀತಗಾಳಿ ಕೂಡ ಶುರುವಾಗಿದೆ.

ಹವಾಮಾನದ ಬದಲಾವಣೆ ಹಿನ್ನೆಲೆಯಲ್ಲಿ ಶೇ.30ರಷ್ಟು ಮಾರಾಟ ಕಡಿಮೆಯಾಗಿದೆ. ಪ್ರಸ್ತುತ ವಾತಾವರಣದಿಂದ ಶೀತಗಾಳಿ ಶುರುವಾಗಿದೆ. ಇದು ಮಾರಾಟದ ಮೇಲೆ ಅಲ್ಪಮಟ್ಟಿನ ಪರಿಣಾಮ ಬೀರಿದೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News