ಉಪ ಚುನಾವಣೆ ಮತ ಏಣಿಕೆ: ಬಿಬಿಎಂಪಿ ವ್ಯಾಪ್ತಿಯ ಕ್ಷೇತ್ರಗಳಲ್ಲಿ 8:30ಕ್ಕೆ ಮತ ಏಣಿಕೆ ಪ್ರಾರಂಭ

Update: 2019-12-07 17:52 GMT

ಬೆಂಗಳೂರು, ಡಿ.7: ಪಾಲಿಕೆ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂಬಂಧಿಸಿದಂತೆ ಮತ ಎಣಿಕೆಯು ಡಿ.9ರಂದು(ಸೋಮವಾರ) ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, 8 ರಿಂದ 8.30ರವರೆಗೆ ಓಸ್ಟಲ್ ಬ್ಯಾಲೆಟ್ ಮತ್ತು ಇ.ಟಿ.ಪಿ.ಬಿ.ಎಸ್ ಎಣಿಕೆ ಪ್ರಕ್ರಿಯೆಯು ಸಂಬಂಧಪಟ್ಟ ಚುನವಣಾ ಅಧಿಕಾರಿಗಳ ಕೊಠಡಿಯಲ್ಲಿ ನಡೆಯಲಿದೆ. 

8.30ಕ್ಕೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಎಣಿಕೆ ಪ್ರಾರಂಭವಾಗಲಿದೆ. ಪಾಲಿಕೆ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್. ಪುರಂ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಮಾಡಲು ಅನುಕೂಲವಾಗುವಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೊಠಡಿಗಳಲ್ಲಿ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅದರಂತೆ ಒಟ್ಟು 63 ಟೇಬಲ್ ಗಳನ್ನು ಅಳವಡಿಸಿದ್ದು, 108 ಮೇಲ್ವಿಚಾರಕರನ್ನು ನಿಯೋಜನೆ ಮತ್ತು 128 ಮತ ಎಣಿಕೆ ಸಹಾಯಕರು ಹಾಗೂ 107 ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ.

ಎಣಿಕೆ ಕೇಂದ್ರಗಳು- ಕೆ.ಆರ್. ಪುರ: ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠ್ಠಲ್ ಮಲ್ಯ ರಸ್ತೆ, ಯಶವಂತಪುರ: ಆರ್.ವಿ. ಇಂಜಿನಿಯರಿಂಗ್ ಕಾಲೇಜ್, ಆರ್.ವಿ. ನಿಕೇತನ್ ಪೋಸ್ಟ್, ಮೈಸೂರ್ ರಸ್ತೆ, ಕೆಂಗೇರಿ, ಮಹಾಲಕ್ಷ್ಮೀ ಲೇಔಟ್: ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠ್ಠಲ್ ಮಲ್ಯ ರಸ್ತೆ, ಶಿವಾಜಿನಗರ: ಮೌಂಟ್ ಕಾರ್ಮಲ್ ಪಿ.ಯು. ಕಾಲೇಜ್, ನಂ-58, ಪ್ಯಾಲೇಸ್ ರಸ್ತೆ, ವಸಂತನಗರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News