ಬೆಂಗಳೂರು: ಮಹಿಳೆಯರಿಗೆ ಸುರಕ್ಷತೆಗಾಗಿ ಪ್ರತ್ಯೇಕ ಲಾಂಜ್ ನಿರ್ಮಾಣ

Update: 2019-12-07 18:08 GMT

ಬೆಂಗಳೂರು, ಡಿ.7: ಬಿಎಂಟಿಸಿ ವತಿಯಿಂದ ನಗರದ 12 ಪ್ರಮುಖ ಟಿಟಿಎಂಸಿ/ಬಸ್ ನಿಲ್ದಾಣಗಳಲ್ಲಿ ಕೇಂದ್ರ ಸರಕಾರದ ನಿರ್ಭಯಾ ಯೋಜನೆಯಡಿ ಹಾಗೂ ರಾಜ್ಯ ಸರಕಾರದ ಸಹಯೋಗದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಪ್ರತ್ಯೇಕವಾಗಿ ಸುಸಜ್ಜಿತವಾದ ಲಾಂಜ್‌ನ್ನು (ವಿಶ್ರಾಂತಿ ಕೊಠಡಿ) ನಿರ್ಮಿಸಲಾಗಿದೆ.

ಶಾಂತಿನಗರ, ಕೆಂಪೇಗೌಡ ಬಸ್ ನಿಲ್ದಾಣ, ಯಶವಂತಪುರ, ಯಲಹಂಕ ಒಲ್ಡ್‌ಟೌನ್, ಐ.ಟಿ.ಪಿ.ಎಲ್, ಬನ್ನೇರುಘಟ್ಟ, ಜಯನಗರ, ಕೆಂಗೇರಿ, ಕಾಡುಗೋಡಿ, ಬನಶಂಕರಿ, ದೊಮ್ಮಲೂರು, ಜೀವನ ಭೀಮನಗರ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ತಾಯಂದಿರು ಮಕ್ಕಳಿಗೆ ಹಾಲು ಉಣಿಸುವ ಪ್ರತ್ಯೇಕವಾದ ಕೊಠಡಿ, ವಾಷ್ ರೂಂ ಮತ್ತು ಬಸ್ಸುಗಳ ಆಗಮನ/ನಿರ್ಗಮನದ ಬಗ್ಗೆ ತಿಳಿಯಲು ಗ್ಲಾಸ್‌ನ ಪಾರ್‌ಟಿಷನ್‌ಗಳು ಮತ್ತು ಇತ್ಯಾದಿ ಸೌಕರ್ಯಗಳನ್ನು ಒದಗಿಸಲಾಗಿದೆ.

ಈ ಮಹಿಳೆಯರ ಲಾಂಜ್ ಬೆಳಗ್ಗೆ 6ರಿಂದ ರಾತ್ರಿ ಕೊನೆಯ ಬಸ್ ನಿರ್ಗಮನದ ತನಕ ಕಾರ್ಯಾಚರಣೆಯಲ್ಲಿರುತ್ತದೆ. ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗಾಗಿ ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News