ಹೊಟ್ಟೆನೋವು,ಸೆಳೆತಗಳಿಂದ ತಕ್ಷಣ ಮುಕ್ತಿ ಪಡೆಯಲು ಇವುಗಳನ್ನು ಸೇವಿಸಿ

Update: 2019-12-08 17:31 GMT

ನಿಮಗೆ ಆಗಾಗ್ಗೆ ಹೊಟ್ಟೆನೋವು,ಸೆಳೆತ ಕಾಡುತ್ತವೆಯೇ? ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತಿರುವ ನಿಮ್ಮ ಹೊಟ್ಟೆಯಲ್ಲಿನ ಸೂಕ್ಷ್ಮಜೀವಿಗಳು ಇದಕ್ಕೆ ಕಾರಣವಾಗಿರಬಹುದು. ಈ ಸಮಸ್ಯೆ ಯಾರನ್ನು ಬೇಕಾದರೂ ಕಾಡುತ್ತದೆ ಯಾದರೂ ಅನಾರೋಗ್ಯಕರ ಆಹಾರ ಕ್ರಮವನ್ನು ಹೊಂದಿರುವವರು ಹೊಟ್ಟೆ ಮತ್ತು ಜೀರ್ಣ ಸಮಸ್ಯೆಗಳಿಗೆ ಸುಲಭವಾಗಿ ಪಕ್ಕಾಗುತ್ತಾರೆ.

ಉಪವಾಸವಿದ್ದರೆ ಎಲ್ಲವೂ ಸರಿಹೋಗುತ್ತದೆ ಎಂದು ನೀವು ಭಾವಿಸಿದರೆ ತಪ್ಪಾಗುತ್ತದೆ. ಆಹಾರವು ಅತ್ಯಂತ ಮುಖ್ಯವಾಗಿದೆ ಮತ್ತು ಶರೀರವು ಶಕ್ತಿಯನ್ನಾಗಿ ಪರಿವರ್ತಿಸಲು ಆಹಾರವನ್ನು ಸೇವಿಸಲೇಬೇಕಾಗುತ್ತದೆ. ಆದರೆ ನೀವು ಹೊಟ್ಟೆನೋವಿನಿಂದ ನರಳುತ್ತಿರುವಾಗ ನೀವು ಸೇವಿಸುವ ಆಹಾರದ ಬಗ್ಗೆ ಕಾಳಜಿಯಿರಲಿ. ಈ ಐದು ಆಹಾರಗಳು ಹೊಟ್ಟೆನೋವನ್ನು ಶಮನಿಸುವಲ್ಲಿ ನೆರವಾಗುತ್ತವೆ.

 ಬಾಳೆಹಣ್ಣು

ಬಾಳೆಹಣ್ಣು ಅತ್ಯುತ್ಕೃಷ್ಟ ಹಣ್ಣು ಮತ್ತು ಆಹಾರವಾಗಿದೆ. ಅದು ಜೀರ್ಣಾಂಗದ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ,ನೋವು,ಸೆಳೆತಗಳಂತಹ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೂ ಪರಿಣಾಮಕಾರಿ ಪರಿಹಾರ ವಾಗಿದೆ. ಬಾಳೆಹಣ್ಣು ವಿಟಾಮಿನ್ ಬಿ6,ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಅನ್ನು ಸಮೃದ್ಧವಾಗಿ ಒಳಗೊಂಡಿರುತ್ತದೆ. ಹೀಗಾಗಿ ಹೊಟ್ಟೆನೋವು ಕಾಡಿದಾಗೆಲ್ಲ ಒಂದು ಬಾಳೆಹಣ್ಣನ್ನು ತಿಂದುಬಿಡಿ. ನೆನಪಿಡಿ,ನೀವು ತಿನ್ನುವ ಬಾಳೆಹಣ್ಣು ಸಂಪೂರ್ಣವಾಗಿ ಪಕ್ವವಾಗಿರಬಾರದು,ಕಾಯಿಯೂ ಆಗಿರಬಾರದು. ರೋಬಸ್ಟಾ ಜಾತಿಯ ಬಾಳೆಹಣ್ಣು ಹೊಟ್ಟೆಯಲ್ಲಿ ಸುಲಭವಾಗಿ ವಿಭಜನೆಗೊಳ್ಳುವುದರಿಂದ ಅದು ಅತ್ಯುತ್ತಮ ಆಯ್ಕೆಯಾಗುತ್ತದೆ.

ಬರೀ ಅನ್ನ

ನೋವು ಸೇರಿದಂತೆ ಜಠರದ ಮತ್ತು ಜೀರ್ಣ ಸಮಸ್ಯೆಗಳಿಗೆ ಅನ್ನವು ಅತ್ಯುತ್ತಮ ಆಹಾರವಾಗಿದೆ. ಗ್ಲುಟೆನ್ ಮುಕ್ತ, ಉರಿಯೂತ ನಿರೋಧಕವಾಗಿರುವ ಅದು ಹೊಟ್ಟೆನೋವನ್ನು ಶಮನಗೊಳಿಸುವಲ್ಲಿ ಪರಿಣಾಮಕಾರಿಯಾಗುತ್ತದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಜೀರ್ಣಾಂಗದ ಆರೋಗ್ಯಕ್ಕೆ ಮುಖ್ಯವಾಗಿವೆ. ಅದರಲ್ಲಿ ನಾರು ಕಡಿಮೆ ಪ್ರಮಾಣದಲ್ಲಿರುವುದರಿಂದ ನಿಮ್ಮ ಹೊಟ್ಟೆ ಸರಿಯಿಲ್ಲದಿದ್ದಾಗ ಅಗತ್ಯವಾಗಿ ಸೇವಿಸಬೇಕಾದ ಆಹಾರವಾಗಿದೆ. ನಾರು ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆನೋವು ಉಲ್ಬಣಗೊಳ್ಳಬಹುದು. ಇತರ ಅನ್ನಗಳಿಗೆ ಹೋಲಿಸಿದರೆ ಬಾಸುಮತಿ ಅನ್ನವು ಸುಲಭವಾಗಿ ಜೀರ್ಣಗೊಳ್ಳುವುದರಿಂದ ಹೊಟ್ಟೆನೋವಿದ್ದಾಗ ಸೇವಿಸಲು ಸೂಕ್ತವಾಗಿದೆ.

ಡೇರಿಯೇತರ ಮೊಸರು

ಮೊಸರಿನಲ್ಲಿ ಜೀರ್ಣಕ್ಕೆ ನೆರವಾಗುವ ಅಗತ್ಯ ಬ್ಯಾಕ್ಟೀರಿಯಾಗಳಿರುತ್ತವೆ. ಆದರೆ ಹೊಟ್ಟೆನೋವಿದೆ ಎಂದು ಡೇರಿಯ ಅಥವಾ ಹಾಲಿನಿಂದ ತಯಾರಾದ ಮೊಸರನ್ನು ಸೇವಿಸಬೇಡಿ. ಸ್ಟೋರ್‌ಗಳಲ್ಲಿ ಲಭ್ಯವಿರುವ ಸೋಯಾ, ಬಾದಾಮ, ಓಟ್,ತೆಂಗಿನ ಹಾಲು ಇತ್ಯಾದಿಗಳಿಂದ ತಯಾರಾಗಿರುವ ಮೊಸರು ಹೊಟ್ಟೆನೋವನ್ನು ಸುಲಭವಾಗಿ ಶಮನಿಸುತ್ತದೆ.

 ಸಿಹಿಗೆಣಸು

ಸಿಹಿಗೆಣಸಿನಲ್ಲಿ ಹೇರಳವಾಗಿರುವ ಪ್ರತಿರೋಧಕ ಪಿಷ್ಟವು ಶರೀರದಲ್ಲಿಯ ಎಲ್ಲ ವಿಷವಸ್ತುಗಳನ್ನು ಮತ್ತು ತೊಂದರೆಯನ್ನುಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ಹೊಟ್ಟೆನೋವನ್ನು ಶಮನಿಸಲು ನೆರವಾಗುವ ಪೊಟ್ಯಾಷಿಯಂ ಮತ್ತು ಮ್ಯಾಗ್ನೀಷಿಯಂ ಕೂಡ ನೆರವಾಗುತ್ತವೆ.

ಪುದೀನಾ

ಪುದೀನಾ ಎಲೆಗಳು ಅದ್ಭುತ ತಂಪುಕಾರಕ ಗುಣಗಳನ್ನು ಹೊಂದಿದ್ದು,ಹೊಟ್ಟೆಯಲ್ಲಿನ ಸ್ನಾಯುಗಳನ್ನು ಸಡಿಸಲಿಸುವ ಮೂಲಕ ಸೆಳೆತವನ್ನು ಕಡಿಮೆಗೊಳಿಸುತ್ತವೆ. ಹೊಟ್ಟೆನೋವಿದ್ದಾಗ ಒಂದು ಕಪ್ ಬೆಚ್ಚಗಿನ ಪುದೀನಾ ಕಷಾಯವನ್ನು ಸೇವಿಸಿದರೆ ತಕ್ಷಣ ಉಪಶಮನ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News