ಬಿಬಿಎಂಪಿ ಮೇಯರ್‌ಗೆ ಪತ್ರ ಬರೆದ ಎಫ್‌ಕೆಸಿಸಿಐ ಅಧ್ಯಕ್ಷ: ಕಾರಣ ಏನು ಗೊತ್ತೇ ?

Update: 2019-12-08 17:34 GMT
ಬಿಬಿಎಂಪಿ ಮೇಯರ್‌ ಗೌತಮ್ ಕುಮಾರ್‌

ಬೆಂಗಳೂರು, ಡಿ.8: ನವೆಂಬರ್ ತಿಂಗಳ ಒಳಗೆ ಅಂಗಡಿ, ಮಳಿಗೆಗಳು, ಉದ್ಯಮಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಅಂತ ಕಿರುಕುಳ ಮಾಡುವ ಮೊದಲು ನಗರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್ ಜನಾರ್ದನ ಅವರು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್‌ಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಅವರು, ಕನ್ನಡ ನಾಮಫಲಕ ಅಂತ ಕಿರುಕುಳ ಮಾಡುವ ಮೊದಲು ರಸ್ತೆ ಗುಂಡಿ ಮುಚ್ಚಿ, ಗುಣಮಟ್ಟದ ಡಾಂಬಾರು ಹಾಕಿ, ಕಸದಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ಅದನ್ನು ತಡೆಯಿರಿ, ಟ್ರಾಫಿಕ್ ಸಮಸ್ಯೆ, ನೀರಿನ ನಿರ್ವಹಣೆ ತಡೆಯಿರಿ. ಅದನ್ನು ಬಿಟ್ಟು ಸಾಕಷ್ಟು ಉದ್ಯಮಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕನ್ನಡ ನಾಮಫಲಕ ಅಂತ ಸಮಸ್ಯೆ ನೀಡಬೇಡಿ. 2020ರ ಎಪ್ರಿಲ್ 30ರವರೆಗೂ ಕನ್ನಡ ನಾಮಫಲಕ ಹಾಕಲು ಕಾಲಾವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ನೋಟಿಸ್: ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮ ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲರಾದ ಮೂವತ್ತು ವಾರ್ಡ್‌ಗಳ, 30 ಮಂದಿ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ಪಾಲಿಕೆ ನೋಟಿಸ್ ಹೊರಡಿಸಿದೆ.

ಪ್ಲಾಸ್ಟಿಕ್ ನಿಷೇಧವಾಗಿರುವ ಹಿನ್ನೆಲೆ, ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವಲ್ಲಿ ದಾಳಿ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವವರಿಗೆ ದಂಡ ವಿಧಿಸಬೇಕು. ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಯಂತ್ರಿಸುವ ಜವಾಬ್ದಾರಿ ಹಿರಿಯ ಆರೋಗ್ಯ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ, ಜವಾಬ್ದಾರಿ ಮರೆತು, ಕಳಪೆ ಕಾರ್ಯಕ್ಷಮತೆ ಇರುವ ಆರೋಗ್ಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News