×
Ad

ಗ್ಲೋಬಲ್ ಕನೆಕ್ಟ್ ವರ್ಚುವಲ್ ಹಬ್ ಆರಂಭ

Update: 2019-12-08 23:10 IST

ಬೆಂಗಳೂರು, ಡಿ.8: ಆರ್ಯ ವೈಶ್ಯ ಬಿಸಿನೆಸ್ ನೆಟ್‌ವರ್ಕಿಂಗ್‌ಗ್ರೂಪ್(ಬಿಶಿಪ್) ತಮ್ಮ ಸಮುದಾಯದ ವ್ಯಾಪಾರ-ವಹಿವಾಟು ಅಭಿವೃದ್ಧಿ ಮತ್ತು ನೂತನ ಕೌಶಲ್ಯಗಳ ಅಳವಡಿಕೆಗಾಗಿ ‘ಗ್ಲೋಬಲ್ ಕನೆಕ್ಟ್ ವರ್ಚುವಲ್ ಹಬ್’ ಆರಂಭಿಸಿದೆ. 

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಹಬ್ ಅನ್ನು ಬಿಡುಗಡೆ ಮಾಡಲಾಯಿತು. ತಂತ್ರಜ್ಞಾನದ ಅತ್ಯುತ್ತಮ ಬಳಕೆ ಮಾಡಿಕೊಳ್ಳುವುದು ಈ ವರ್ಚುವಲ್ ಹಬ್‌ನ ಪ್ರಮುಖ ಉದ್ದೇಶವಾಗಿದೆ. ಆ ಮೂಲಕ ವಿಶ್ವದ ಪ್ರತಿ ಮೂಲೆ ಮೂಲೆಗು ತಲುಪುವುದು ಇದರ ಗುರಿಯಾಗಿದೆ. ಈ ಕುರಿತು ಮಾತನಾಡಿದ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ಎಸ್.ಆರ್.ಶ್ರೀಧರ್, ಈ ಹಿಂದೆ ವ್ಯಾಪಾರ ಎಂಬ ಪದ ಅನ್ವರ್ಥಕ ನಾಮವಾಗಿ ನಮ್ಮ ಆರ್ಯ ವೈಶ್ಯ ಸಮುದಾಯ ಇತ್ತು. ಆದರೆ, ಇಂದು ಬೇರೆ ಸಮುದಾಯ ಬೆಳವಣಿಯಿಂದ ನಮ್ಮ ಸಮುದಾಯ ಕುಂಠಿತವಾಗಿದೆ. ಅಲ್ಲದೆ, ವ್ಯಾಪರಸ್ಥರು ದೂರವಾಗಿದ್ದಾರೆ. ಇವರನ್ನು ಒಗ್ಗೂಡಿಸಿ ಮತ್ತೆ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಮಂಚೂಣಿಗೆ ಬರುವುದು, ಆ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಈ ಸಮಾವೇಶ ಆಯೋಜಿಸಿದ್ದೇವೆ. ಎಲ್ಲರೂ ಒಂದೇ ವೇದಿಕೆಯಲ್ಲಿ ಸಿಗಲಿದ್ದಾರೆ. ಆನಂತರ ತಮ್ಮ ವ್ಯಾಪಾರ ವಹಿವಾಟುಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಬೇರೆ ಅವರ ಉದ್ಯಮಕ್ಕೂ ಸಹಕಾರಿಯಾಗಲಿದ್ದಾರೆ ಎಂದರು.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಮೊಬೈಲ್ ಆಪ್ ದೊರೆಯಲಿದ್ದು, ನಮ್ಮ ಸಮುದಾಯದವರು ಡೌನ್‌ಲೋಡ್ ಮಾಡಿಕೊಂಡು ಪರಸ್ಪರ ಬಿಸಿನೆಸ್‌ಗೆ ಅನುಕೂಲ ಮಾಡಿಕೊಡಬಹುದು ಎಂದರು.

ಸಮಾರಂಭದಲ್ಲಿ ಬಿಶಿಪ್ ಉಪಾಧ್ಯಕ್ಷ ಬಿ.ಎ.ನಾಗರಾಜ್, ವರ್ಚುವಲ್ ಹಬ್ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕ ಆರ್.ಎಸ್.ರಾಜೇಶ್, ಸಹ ಸಂಸ್ಥಾಪಕ ಮತ್ತು ಕಾರ್ಯದರ್ಶಿ ಸಂದೀಪ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News