ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019: ಹೆರಿಟೇಜ್ ಫುಡ್ಸ್‌ ಸಂಸ್ಥೆಗೆ 2 ಪ್ರಶಸ್ತಿ

Update: 2019-12-10 18:15 GMT

ಬೆಂಗಳೂರು, ಡಿ.10: ಹೈನು ಉತ್ಪನ್ನ ಕಂಪನಿಯಾದ ಹೆರಿಟೇಜ್ ಫುಡ್ಸ್‌ಗೆ ಭಾರತದ ಆಹಾರ ಸುರಕ್ಷಾ ಶೃಂಗ ಪ್ರಶಸ್ತಿ-2019ರಲ್ಲಿ ಎರಡು ಪ್ರಶಸ್ತಿ ಲಭಿಸಿದೆ.

ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ಅತ್ಯುತ್ತಮ ಸಾಧನೆಗಾಗಿ ಕಂಪನಿಯು ‘ಬೆಸ್ಟ್ ಕಸ್ಟಮರ್ ಸರ್ವೀಸ್ ಪ್ರೊವೈಡರ್ ಆಫ್ ದ ಇಯರ್’ ಪ್ರಶಸ್ತಿಯನ್ನು ಗೆದ್ದಿದೆ. ಅಂತೆಯೇ ಈ ವರ್ಷದ ಅತ್ಯುತ್ತಮ ‘ತಂತ್ರಜ್ಞಾನ ಅನುಶೋಧಕ ಪ್ರಶಸ್ತಿ’ಯೂ ಕಂಪನಿಗೆ ಸಂದಿದೆ. ರೈತರಿಂದ ಸುಲಲಿತವಾಗಿ ಹಾಲು ಖರೀದಿಸುವುದು ಮತ್ತು ತಾಜಾ ಹಾಗೂ ಪೌಷ್ಟಿಕಯುಕ್ತ ಹಾಲನ್ನು ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯನ್ನು ಸಮನ್ವಯಗೊಳಿಸಿದ್ದಕ್ಕಾಗಿ ಈ ಪ್ರಶಸ್ತಿಯ ಗೌರವ ಸಂದಿದೆ.

ಕಂಪನಿಯ ಹೈನು ವಿಭಾಗದ ಮುಖ್ಯಸ್ಥ ಜೆ.ಸಾಂಬಮೂರ್ತಿ ಪ್ರಶಸ್ತಿ ಸ್ವೀಕರಿಸಿ, ಭಾರತದ ಆಹಾರ ಸುರಕ್ಷಾ ಶೃಂಗದಲ್ಲಿ ಈ ಪ್ರಶಸ್ತಿಗಳನ್ನು ಸ್ವೀಕರಿಸಲು ನನಗೆ ಸಂತಸವಾಗುತ್ತಿದೆ. ಗ್ರಾಹಕ ಮೊದಲು ಎಂಬ ನೀತಿಯಲ್ಲಿ ನಾವು ಸದಾ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ ಹಾಗೂ ಅದಕ್ಕೆ ಅನುಗುಣವಾಗಿ ಮುನ್ನಡೆದಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News