ಹಿರಿಯ ನಟ, ದಿವಂಗತ ಉದಯ್‌ ಕುಮಾರ್ ಪತ್ನಿ ಕಮಲಮ್ಮ ನಿಧನ

Update: 2019-12-11 16:12 GMT

ಬೆಂಗಳೂರು, ಡಿ.11: ಕನ್ನಡ ಚಿತ್ರಂಗದ ಹಿರಿಯ ನಟ ದಿವಂಗತ ಉದಯ್ ಕುಮಾರ್ ಅವರ ಪತ್ನಿ ಕಮಲಮ್ಮ ಬುಧವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ ಅವರು, ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಆನೇಕಲ್ ನಗರದ ಸ್ವಗೃಹದಲ್ಲಿಡಲಾಗಿತ್ತು.

ಕಮಲಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬುಧವಾರ ಸಂಜೆ ಧರ್ಮದ ವಿಧಿವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆ ಜರುಗಿತು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News