ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಕಿರುಚಿತ್ರ ಆಯ್ಕೆ

Update: 2019-12-13 18:24 GMT

ಬೆಂಗಳೂರು, ಡಿ.13: ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಆದಿತ್ಯ ಕುರಾನ ಮತ್ತು ಆಸೀಫಾ ನಟಿಸಿರುವ 15 ನಿಮಿಷಗಳ ಕಿರುಚಿತ್ರ ಆಯ್ಕೆಯಾಗಿದ್ದು, ಇವರಿಬ್ಬರು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಇಂಟರ್ ನ್ಯಾಷನಲ್ ಐಕಾನ್ ಫೆಡರೇಶನ್‌ನ ಅಧ್ಯಕ್ಷ ಮುಹಮದ್ ನಗ್ಮಾನ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಿರುಚಿತ್ರವು ಪ್ರವಾಸೋದ್ಯಮ, ಪ್ರೀತಿ, ಲಿಂಗತಾರತಮ್ಯತೆ, ಭಾರತದ ಸಂಸ್ಕೃತಿಯ ಕುರಿತ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಇದೊಂದು ಹಿಂದಿ ಕಿರುಚಿತ್ರವಾಗಿದ್ದು, ಇದಕ್ಕೆ ದಹನ ಶೀರ್ಷಿಕೆಯನ್ನು ಇಡಲಾಗಿದೆ. ಜೊತೆಗೆ ಇವರು ಕಾನ್ಸ್ ಫಿಲಂ ಫೆಸ್ಟಿವಲ್‌ನನ್ನು ಪ್ರತಿನಿಧಿಸುತ್ತಿರುವ ಮೊದಲ ಕನ್ನಡಿಗರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News