ಪೌರತ್ವ ಕಾಯ್ದೆ: ವಿವಾದ ಸೃಷ್ಟಿಸಿದ ಮೇಘಾಲಯ ರಾಜ್ಯಪಾಲರ ಹೇಳಿಕೆ

Update: 2019-12-19 06:40 GMT

ಶಿಲ್ಲಾಂಗ್, ಡಿ.14: ವಿಭಜಕ ಪ್ರಜಾಪ್ರಭುತ್ವವನ್ನು ಇಷ್ಟಪಡದವರು ಉತ್ತರ ಕೊರಿಯಾಗೆ ಹೋಗಿ ಎಂದು ಹೇಳಿಕೆ ನೀಡುವ ಮೂಲಕ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

"ಪ್ರಜಾಪ್ರಭುತ್ವ ಅಗತ್ಯವಾಗಿ ವಿಭಜಕವಾಗಿರಲೇಬೇಕು. ಅದನ್ನು ನೀವು ಬಯಸುವುದಿಲ್ಲ ಎಂದಾದರೆ ಉತ್ತರ ಕೊರಿಯಾಗೆ ಹೋಗಿ" ಎಂದು ರಾಯ್ ಟ್ವೀಟ್ ಮಾಡಿದ್ದರು. ಹೊಸ ಪೌರತ್ವ ಮಸೂದೆ ಬೆಂಬಲಿಸಿ ರಾಯ್ ಈ ಟ್ವೀಟ್ ಮಾಡಿದ್ದರು.

"ಈ ವಿವಾದ ವಾತಾವರಣದಲ್ಲಿ ಎರಡು ಅಂಶಗಳನ್ನು ಮರೆಯಬಾರದು; 1. ಧರ್ಮದ ಹೆಸರಿನಲ್ಲಿ ಒಂದು ಬಾರಿ ದೇಶ ವಿಭಜನೆಯಾಗಿದೆ. 2. ಪ್ರಜಾಪ್ರಭುತ್ವವು ಅಗತ್ಯವಾಗಿ ವಿಭಜಕವಾಗಿರಬೇಕು. ಅದನ್ನು ನೀವು ಇಚ್ಛಿಸುವುದಿಲ್ಲ ಎಂದಾದರೆ ಉತ್ತರ ಕೊರಿಯಾಗೆ ಹೋಗಿ" ಎಂದು ಹೇಳಿದ್ದರು.

ರಾಜಭವನದ ಪ್ರವೇಶ ದ್ವಾರಕ್ಕೆ ಪ್ರತಿಭಟನಾಕಾರರು ಆಗಮಿಸುವ ಮುನ್ನ ರಾಜ್ಯಪಾಲರು ಈ ಟ್ವೀಟ್ ಮಾಡಿದ್ದರು. ಭದ್ರತಾಕೋಟೆಯನ್ನು ಬೇಧಿಸಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದಾರೆ.

ರಾಜ್ಯವನ್ನು ಪ್ರವೇಶಿಸಿರುವ ಹೊರಗಿನವರ ಕಡ್ಡಾಯ ನೋಂದಣಿಗೆ ಅವಕಾಶ ನೀಡುವ ಪ್ರಸ್ತಾವಿತ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯದಲ್ಲಿ ಒಳರೇಖೆ ಪರವಾನಿಗೆಯನ್ನು ಅನುಷ್ಠಾನಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News