ಬೆಂಗಳೂರು: ಡಿ.15ರಂದು ಕರುನಾಡು ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯ ಮಟ್ಟದ ಕವಿಗೋಷ್ಠಿ

Update: 2019-12-14 16:25 GMT

ಬೆಂಗಳೂರು, ಡಿ.13: ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ವಿಜಯ ಕಾಲೇಜ್ ಜಯನಗರ ಇದರ ಸಹಭಾಗಿತ್ವದಲ್ಲಿ ವಿಜಯ ಕಾಲೇಜ್ ಜಯನಗರ ಆವರಣದಲ್ಲಿ ಕರುನಾಡು ಸಾಹಿತ್ಯ ಪರಿಷತ್ತು ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ, ರಾಜ್ಯ ಘಟಕ ಉದ್ಘಾಟನಾ ಕಾರ್ಯಕ್ರಮ ನಾಳೆ ನಡೆಯಲಿದೆ. 

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ದೂರದರ್ಶನ ಕೇಂದ್ರ ಕಾರ್ಯಕ್ರಮ ನಿರ್ಮಾಪಕಿ ಎಚ್.ಎನ್.ಆರತಿ ನಿರ್ವಹಿಸಲಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ.ಪದ್ಮಿನಿ ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಮಟ್ಟದ ಕವಿಗೋಷ್ಠಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಸಾಹಿತಿ ಸರಸಮ್ಮ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದಲ್ಲಿ ಡಾ.ಆರ್ವಿ ಪ್ರಭಾಕರ್, ಪ್ರೊ.ಡಿ.ಆರ್.ಸುಧಾ, ಸಂಸ್ಥೆಯ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಸ್.ಎಲ್.ಮಂಜುನಾಥ್ ಹಾಗೂ ಸಾಹಿತಿಗಳಾದ ಪದ್ಮ ಮೂರ್ತಿ ಹಾಸನ, ರಫೀಕ್ ಗುಡಿಬಂಡೆ, ರಘುನಂದನ್ ಬೆಂಗಳೂರು, ಉಮೇಶ್ ಬೆಂಗಳೂರು, ಶಾಂತ ಕುಂಟಿನಿ ಪುತ್ತೂರು, ಯಂಶ ಬೇಂಗೀಲ, ಪ್ರಕಾಶ್ ಶೆಟ್ಟಿ ಹೊನ್ನಾವರ, ಫಯಾಜ್ ಅಹ್ಮದ್ ಖಾನ್ ಗುಡಿಬಂಡೆ, ಬಿ.ಎಸ್.ಇಸ್ಮಾಯಿಲ್ ಕುತ್ತಾರ್, ಸಮಾಜ ಸೇವಕರಾದ ಡಾ.ಎಂ.ಎಂ ಭಾಷಾ ನಂದಿ, ಎ.ಟಿ ಶಂಕರ್ ಚಿಕ್ಕಬಳ್ಳಾಪುರ, ಹಾಶಿಂ ಅಮ್ಜದಿ ಬೆಂಗಳೂರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಹಾಗೂ ಕರುನಾಡು ಅಭಿನಂದನಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಕರುನಾಡು ಸಾಹಿತ್ಯ ಪರಿಷತ್ತು ಮಹಿಳಾ ಮುಖ್ಯಸ್ಥೆ ಅಮಿತಾ ಅಶೋಕ್ ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News