ಪೌರತ್ವ ಕಾನೂನು ಮತ್ತು ಎನ್‌ಆರ್‌ಸಿ ಬಿಜೆಪಿಯ ದುಷ್ಟ, ವಿನಾಶಕಾರಿ ತಂತ್ರ: ಎಸ್‌ಯುಸಿಐ

Update: 2019-12-19 06:33 GMT

ಬೆಂಗಳೂರು, ಡಿ. 14: ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್‌ಆರ್‌ಸಿ ಬಿಜೆಪಿಯ ದುಷ್ಟ ಮತ್ತು ವಿನಾಶಕಾರಿ ತಂತ್ರ. ಹೀಗಾಗಿ ಈ ಎರಡೂ ಪಿತೂರಿಗಳ ವಿರುದ್ಧ ಪ್ರಬಲ ಹೋರಾಟ ಅನಿವಾರ್ಯ ಎಂದು ಎಸ್‌ಯುಸಿಐ ಆಕ್ರೋಶ ವ್ಯಕ್ತಪಡಿಸಿದೆ.

ಪೌರತ್ವ ತಿದ್ದುಪಡಿ ಮಸೂದೆಯ ಅವಶ್ಯಕತೆ ಇರಲಿಲ್ಲ. ವಾಸ್ತವದಲ್ಲಿ ಇದು ಜನರಲ್ಲಿ ಕೋಮುವಾದಿ ಮತ್ತು ಪ್ರಾದೇಶಿಕ ಭಾವನೆಗಳನ್ನು ಕೆರಳಿಸಿ ಜನಗಳ ಒಗ್ಗಟ್ಟನ್ನು ಒಡೆದು, ಅವರ ಗಮನವನ್ನು ಬೇರೆಡೆಗೆ ಸೆಳೆದು, ಅವರು ತಮ್ಮ ಜೀವನದ ನೈಜ ಸಮಸ್ಯೆಗಳ ವಿರುದ್ಧ ಪ್ರಜಾತಾಂತ್ರಿಕ ಹೋರಾಟಗಳನ್ನು ಕಟ್ಟದಂತೆ ತಡೆಯುವ ಬಿಜೆಪಿ, ಆರೆಸೆಸ್ಸ್ ಪಿತೂರಿಯಾಗಿದೆ ಎಂದು ಟೀಕಿಸಿದೆ.

ಯಾವುದೇ ದೇಶದ ಒಬ್ಬ ವ್ಯಕ್ತಿಗೆ ಇನ್ನೊಂದು ದೇಶದಲ್ಲಿ ಅಂತರ್‌ರಾಷ್ಟ್ರೀಯ ಕಾನೂನು, ರೀತಿ-ರಿವಾಜುಗಳಿಗೆ ಅನುಗುಣವಾಗಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಯಾವುದೇ ಜಾತಿ, ಧರ್ಮ, ಜನಾಂಗದ ತಾರತಮ್ಯಕ್ಕೆ ಒಳಗಾಗದೇ ಆ ದೇಶದ ಕಾನೂನಿಗೆ ತಕ್ಕಂತೆ ಪೌರತ್ವವನ್ನು ಪಡೆಯುವ ಹಕ್ಕಿದೆ ಎಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News