ದುಬಾರಿ ಶುಲ್ಕ ನೆಪದಲ್ಲಿ ಸುಲಿಗೆ ಆರೋಪ: ಎಎಸ್ಸೈ ಸೇರಿ‌ ನಾಲ್ವರು ಪೊಲೀಸರ ಅಮಾನತು

Update: 2019-12-15 17:41 GMT

ಬೆಂಗಳೂರು, ಡಿ.15: ವಾಹನ ಚಾಲನೆ ವೇಳೆ ಮದ್ಯ ಸೇವನೆ ಪ್ರಕರಣ ಸಂಬಂಧ ಶುಲ್ಕ ನೆಪದಲ್ಲಿ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಎಎಸ್ಸೈ ಹಾಗೂ ಮೂವರು ಪೊಲೀಸರನ್ನು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅಮಾನತು ಮಾಡಿದ್ದಾರೆ.

ಅಶೋಕನಗರ ಸಂಚಾರ ಠಾಣೆಯ ಎಎಸ್ಸೈ ಮುನಿಯಪ್ಪ ಹಾಗೂ ಸಿಬ್ಬಂದಿಗಳಾದ ಗಂಗರಾಜ್, ನಾಗರಾಜ್ ಮತ್ತು ಹರ್ಷ ಎಂಬುವವರನ್ನು ಅಮಾನತುಗೊಳಿಸಲಾಗಿದೆ.

ಖಾಸಗಿ ವ್ಯಕ್ತಿಯಗಳ ಸಹಾಯದಿಂದ ಖಾಸಗಿ ಆಲ್ಕೋಹಾಲ್ ಮೀಟರ್‌ಗಳನ್ನು ಬಳಸಿ, ಪಾನಮತ್ತ ಚಾಲಕರನ್ನು ಅಡ್ಡ ಗಟ್ಟಿ ಅವರಿಗೆ ನ್ಯಾಯಾಲಯಕ್ಕೆ ಹೋದರೆ 15 ಸಾವಿರ ದಂಡ ಕಟ್ಟಬೇಕಾಗುತ್ತದೆ. ಹಾಗೆ ನಿಮ್ಮ ವಾಹನ ಜಪ್ತಿ ಮಾಡಬೇಕಾಗುತ್ತದೆ ಎಂದು ಹೆದರಿಸಿ ನಗದು ಮತ್ತು ಆನ್ ಲೈನ್ ಮೂಲಕ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.  ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ವೇಳೆ ವಾಹನ ಚಾಲಕರಿಂದ ಪಡೆದಿದ್ದ 32 ಸಾವಿರ ರೂ.ನಗದು, ಮೂರು ಖಾಸಗಿ ಆಲ್ಕೋಹಾಲ್ ಮೀಟರ್‌ಗಳು, ಚಾಲಕರುಗಳ ವಾಹನ ಪರವಾನಗಿ ದಾಖಲೆ ಜಪ್ತಿ ಮಾಡಿ, ಇಲ್ಲಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಗೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News