ಸುರಕ್ಷತೆಯಿಲ್ಲದ ನೂತನ ದತ್ತಾಂಶ ರಕ್ಷಣೆ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು:ನ್ಯಾ.ಬಿ.ಎನ್.ಶ್ರೀಕೃಷ್ಣ

Update: 2019-12-15 17:45 GMT

ಹೊಸದಿಲ್ಲಿ,ಡಿ.15: ಸಂಪುಟವು ಒಪ್ಪಿಗೆ ನೀಡಿರುವ ದತ್ತಾಂಶ ರಕ್ಷಣೆ ಮಸೂದೆಯು ಶ್ರೀಕೃಷ್ಣ ಸಮಿತಿಯು ರೂಪಿಸಿದ್ದ ದತ್ತಾಂಶ ರಕ್ಷಣೆ ಮಸೂದೆಗೆ ತದ್ವಿರುದ್ಧವಾಗಿದ್ದು ಅದು ಈಗಿನ ರೂಪದಲ್ಲಿಯೇ ಸಂತ್ತಿನಲ್ಲಿ ಅಂಗೀಕಾರಗೊಂಡರೆ ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಎಂದು ಸಮಿತಿಯ ನೇತೃತ್ವ ವಹಿಸಿದ್ದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಅವರು ಹೇಳಿದ್ದಾರೆ.

ಸರಕಾರಕ್ಕೆ ಹೆಚ್ಚಿನ ಸ್ವಾಯತ್ತೆ ಮತ್ತು ಕಣ್ಗಾವಲು ಅಧಿಕಾರವನ್ನು ನೀಡಲು ಮಸೂದೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ವಾದಿಸಿದ್ದಾರೆ.

ಈ ಮಸೂದೆಯು ಸರಕಾರವು ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಕಣ್ಣಿರಿಸಲು ಮತ್ತು ಅದು ಬಯಸಿದರೆ ಅವರ ಮೇಲೆ ತಪ್ಪುಗಳನ್ನು ಹೊರಿಸುವ ‘ ಒರ್ವೆಲಿಯನ್’ ಸ್ಥಿತಿಗೆ ದೇಶವನ್ನು ತಳ್ಳುತ್ತದೆ ಎಂದು ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀಕೃಷ್ಣ ಹೇಳಿದ್ದಾರೆ.

ಪ್ರಜೆಗಳ ಖಾಸಗಿತನವನ್ನು ಖಚಿತ ಪಡಿಸಲು ಸಮಿತಿಯು ಎಚ್ಚರಿಕೆಯಿಂದ ಕರಡು ಮಸೂದೆಯಲ್ಲಿ ಸೇರಿಸಿದ್ದ ಸುರಕ್ಷಾ ಅಂಶಗಳನ್ನು ಈಗ ತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿಯ ದತ್ತಾಂಶಗಳನ್ನು ಪರಿಶೀಲಿಸುವ ಮುನ್ನ ಆತನ/ಆಕೆಯ ಅನುಮತಿಯನ್ನು ಪಡೆದುಕೊಳ್ಳುವುದು ಶ್ರೀಕೃಷ್ಣ ಸಮಿತಿಯ ಕರಡು ಮಸೂದೆಯಲ್ಲಿನ ಇಂತಹ ಸುರಕ್ಷಾ ಅಂಶಗಳಲ್ಲಿ ಒಂದಾಗಿತ್ತು. ಹಾಲಿ ಮಸೂದೆಯಲ್ಲಿ ಈ ಅಂಶವನ್ನು ದುರ್ಬಲಗೊಳಿಸಲಾಗಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News