ನನ್ನ ದಾಖಲೆಯನ್ನು ಕೊಹ್ಲಿ, ರೋಹಿತ್ ಮುರಿಯಬಲ್ಲರು : ಲಾರಾ

Update: 2019-12-16 04:57 GMT

ಹೊಸದಿಲ್ಲಿ, ಡಿ.15: ಭಾರತದ ಇಬ್ಬರು ಅಗ್ರ ಕ್ರಮಾಂಕದ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ತಾನು ಗಳಿಸಿದ್ದ 400 ರನ್ ದಾಖಲೆಯನ್ನು ಮುರಿಯಬಲ್ಲರು ಎಂದು ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ ಹೇಳಿದ್ದಾರೆ.

 ‘‘ಆಕ್ರಮಣಕಾರಿ ಆಟಗಾರರು ದಾಖಲೆಯನ್ನು ಮುರಿಯಲು ಸೂಕ್ತವಾಗಿರುತ್ತಾರೆ. ವಿರಾಟ್ ಕೊಹ್ಲಿ, ರೋಹಿತ್‌ರಂತಹ ಆಟಗಾರರ ರನ್ ಗಳಿಸುವ ಶೈಲಿ ಗಮನಿಸಿದರೆ ಅವರು ಖಂಡಿತವಾಗಿ ನನ್ನ ದಾಖಲೆ ಮುರಿಯಬಲ್ಲರು’’ ಎಂದು ಲಾರಾ ಅಭಿಪ್ರಾಯಪಟ್ಟರು. ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನವೆಂಬರ್‌ನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 335 ರನ್ ಗಳಿಸಿ ಲಾರಾ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ (400 ರನ್)ಮುರಿಯುವತ್ತ ಹೆಜ್ಜೆ ಇಟ್ಟಿದ್ದರು. ಆದರೆ, ಆಸ್ಟ್ರೇಲಿಯದ ನಾಯಕ ಟಿಮ್ ಪೈನ್ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿದ ಕಾರಣ ವಾರ್ನರ್‌ಗೆ ಅಪೂರ್ವ ದಾಖಲೆಯೊಂದನ್ನು ಮುರಿಯವ ಅವಕಾಶ ಕೈತಪ್ಪಿತು. ‘‘ನಾನು ವಾರ್ನರ್‌ರೊಂದಿಗೆ ಈ ವಿಚಾರದ ಕುರಿತು ಮಾತನಾಡಿದ್ದೆ. ಇನಿಂಗ್ಸ್ ಡಿಕ್ಲೇರ್ ನನಗೆ ಸೇರಿದ್ದಲ್ಲ. ಅದು ತಂಡದ ನಿರ್ಧಾರವಾಗಿತ್ತು ಎಂದರು. ಅವರು ನನ್ನ ದಾಖಲೆಯ ಸನಿಹ ಬಂದಿದ್ದರು. ಆದರೆ, ಆ ದಿನ ಮಳೆ ಸುರಿಯುವ ಸಾಧ್ಯತೆಯೂ ಇತ್ತು’’ ಎಂದು ಅಂಧರ ಸಮರ್ಥನಂ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಾರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News