ದೌರ್ಜನ್ಯ ತಡೆ, ಉದ್ಯೋಗ ಖಾತ್ರಿ ಜಾರಿಗೆ ಪಟ್ಟು: ಬೆಂಗಳೂರಿನಲ್ಲಿ ಮಹಿಳೆಯರಿಂದ ಪ್ರತಿಭಟನಾ ಮೆರವಣಿಗೆ

Update: 2019-12-16 15:47 GMT

ಬೆಂಗಳೂರು, ಡಿ.16: ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸೋಮವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ ಮಹಿಳೆಯರು, ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಪಟ್ಟು ಹಿಡಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ ಕೆಲಸದ ದಿನಗಳಿಗೆ ವಿಧಿಸಿರುವ ನೂರು ದಿನಗಳ ಮಿತಿಯನ್ನು ರದ್ದುಗೊಳಿಸಿ, ಕೆಲಸದ ನಿಯಮಗಳನ್ನು ಮರುವಿಮರ್ಶಿಸಿ ಕನಿಷ್ಠ 700 ರೂ. ಕೂಲಿ ನೀಡಬೇಕೆಂದು ಒತ್ತಾಯ ಮಾಡಿದರು.

ಉದ್ಯೋಗ ಖಾತರಿ ಯೋಜನೆಯ ಕೆಲಸದ ಸ್ಥಳದಲ್ಲಿ ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಮೂಲಭೌತ ಸೌಕರ್ಯಗಳನ್ನು ಕಲ್ಪಿಸಬೇಕು. ಅದೇ ರೀತಿ, ಕನಿಷ್ಠ ಕೂಲಿ ಅನ್ನು 700 ರೂಪಾಯಿ ಹೆಚ್ಚಿಸಬೇಕು ಎಂದು ಪ್ರತಿಭಟನಾ ನಿರತ ಮಹಿಳೆಯರು ಆಗ್ರಹಿಸಿದರು.

ಸಮಾನತೆಯನ್ನು ಆಶಿಸುವ ಕಾಲಘಟ್ಟದಲ್ಲಿ ಮಹಿಳಾ ಸುರಕ್ಷತೆಗೇ ಧಕ್ಕೆ ಬಂದಿರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಜಾಗೃತಿ ಹೆಚ್ಚಾಗಬೇಕಿದೆ.

-ಕೆ.ಎಸ್.ವಿಮಲಾ, ಮಹಿಳಾ ಹೋರಾಟಗಾರ್ತಿ

ಮಹಿಳೆಯರ ಸುರಕ್ಷತೆ ಕುರಿತ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಂಭೀರವಾಗಿ ಪರಿಗಣಿಸಿ, ಶಾಶ್ವತ ಪರಿಹಾರ ಒದಗಿಸಬೇಕು. ಇಲ್ಲದಿದ್ದಲ್ಲಿ, ತಮ್ಮ ಹೋರಾಟ ಮುಂದುವರೆಸಲಾಗಿದೆ.

-ದೇವಿ, ಅಧ್ಯಕ್ಷೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

ಬೇಡಿಕೆಗಳು

* ಪಟ್ಟಣ-ನಗರ ಪ್ರದೇಶಗಳಲ್ಲಿ ನಗರ ಉದ್ಯೊಗ ಖಾತ್ರಿ ಯೋಜನೆ ಜಾರಿಗೊಳಿಸಿ

* ಎಂಎಫ್‌ಐಗಳಿಂದ ಮಹಿಳೆಯರನ್ನು ರಕ್ಷಿಸಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ಬಲಪಡಿಸಿ

* ಖಾಸಗಿ ನೀರು ದಂಧೆಗೆ ಕಡಿವಾಣ ಹಾಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News