ಮೆಟ್ರೋ ಸೇವೆ ವಿಸ್ತರಿಸಿದ ಬೆನ್ನಲ್ಲೇ ಮಧ್ಯರಾತ್ರಿವರೆಗೂ ಬಸ್ ಸೇವೆ ವಿಸ್ತರಣೆಗೆ ಆಗ್ರಹ

Update: 2019-12-16 17:39 GMT

ಬೆಂಗಳೂರು, ಡಿ.16: ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಿದ ಬೆನ್ನಲ್ಲೇ ಮಧ್ಯರಾತ್ರಿವರೆಗೂ ಬಿಎಂಟಿಸಿ ಬಸ್ ಸೇವೆ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ರಾತ್ರಿ ಮೆಟ್ರೊ ಬಳಸುವವರು ಸುರಕ್ಷಿತವಾಗಿ ಮನೆ ತಲುಪಲು ಬಸ್ ಸೇವೆಯೂ ಅಗತ್ಯವಾಗಿದೆ. ಬಿಎಂಟಿಸಿಯಿಂದ ಪ್ರತಿ ಮೆಟ್ರೊ ನಿಲ್ದಾಣಗಳ ಬಳಿ ಫೀಡರ್ ಸೇವೆ ಒದಗಿಸುವುದು ಅಗತ್ಯ. ಕೇವಲ ಮೆಟ್ರೊ ರೈಲು ವಿಸ್ತರಣೆ ಮಾಡಿದರೆ ಸಾಲದು ನಗರದ ಎಲ್ಲ ಭಾಗಕ್ಕೂ ಮೆಟ್ರೊ ಇಲ್ಲ. ಹೀಗಾಗಿ ಮೆಜೆಸ್ಟಿಕ್ ಹಾಗೂ ನಗರದ ಪ್ರಮುಖ ಭಾಗಗಳಿಂದ ಮಧ್ಯರಾತ್ರಿ 1 ಗಂಟೆವರೆಗೂ ಬಿಎಂಟಿಸಿ ಬಸ್ ಸೇವೆ ನೀಡಬೇಕು ಎಂದು ಸಂಘ ಸಂಸ್ಥೆಗಳು ಒತ್ತಾಯಸಿವೆ.

ರಾತ್ರಿ ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಮಿನಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದು ಉತ್ತಮ ಎಂಬುದು ಪ್ರಯಾಣಿಕರ ಬೇಡಿಕೆಯೂ ಆಗಿದೆ. ರಾತ್ರಿ ಮೀಟರ್‌ಗಿಂತ ಒಂದೂವರೆ ಪಟ್ಟು ಹೆಚ್ಚು ಹಣ ಕೇಳಲು ಅವಕಾಶವಿದ್ದರೂ ಅದ್ಕಕಿಂತ ಹೆಚ್ಚು ಹಣಕ್ಕೆ ಚಾಲಕರು ಬೇಡಿಕೆ ಇಡುತ್ತಾರೆ. ಮೆಟ್ರೊದ ರಾತ್ರಿ ಸೇವೆಯಿಂದ ಪ್ರಯಾಣಿಕರ ಪರದಾಟ ಕಡಿಮೆಯಾಗುವ ಸಾಧ್ಯತೆ ಇದೆ. ರಾತ್ರಿ ಪ್ರಯಾಣ ಮಾಡುವವರಿಗೆ ಅದರಲ್ಲೂ ಮಹಿಳೆಯರಿಗೆ ಮೆಟ್ರೊ ಸಿಬ್ಬಂದಿಯೇ ರಕ್ಷಣೆ ನೀಡಲಿದ್ದಾರೆ. ರಾತ್ರಿ 10 ಗಂಟೆ ಬಳಿಕ ರೈಲಿನೊಳಗೆ ಪ್ರಯಾಣಿಕರ ಜತೆಗೆ ಭದ್ರತಾ ಸಿಬ್ಬಂದಿ ಪ್ರಯಾಣಿಸುವ ವ್ಯವಸ್ಥೆಯನ್ನು ಈಗಾಗಲೇ ಜಾರಿ ಮಾಡಲಾಗಿದೆ. ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನಹಳ್ಳಿ ಮಾರ್ಗಕ್ಕೆ 358 ಸಿಬ್ಬಂದಿ ನಿಯೋಜನೆಗೆ ಟೆಂಡರ್ ಆಹ್ವಾನಿಸಲಾಗಿದೆ. ಇದರಲ್ಲಿ ನಿಲ್ದಾಣ, ಪ್ಲಾಟ್ ಫಾರ್ಮ್ ಜತೆಗೆ ರೈಲಿನೊಳಗೂ ಭದ್ರತೆ ನೀಡುವ ಕೆಲಸದ ಬಗ್ಗೆ ಪ್ರಸ್ತಾಪಿಸಲಾಗಿದೆ. 

ಸಂಘ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ಪ್ರಯಾಣಿಕರ ವೇದಿಕೆಯ ಒತ್ತಾಯ ರಾತ್ರಿ ಪಾಳಿಯಲ್ಲಿ ದುಡಿಯುವ ಕಾರ್ಮಿಕರಿಗಾಗಿ ಮಧ್ಯರಾತ್ರಿವರೆಗೆ ಸೇವೆ ನೀಡಬೇಕೆಂಬ ಬೇಡಿಕೆ ಹಿಂದಿನಿಂದಲೂ ಇತ್ತು. ಇದಕ್ಕೆ ಬಿಎಂಆರ್‌ಸಿಎಲ್ ಮನ್ನಣೆ ನೀಡಿರುವುದು ಸರಿ. ಅದೇ ರೀತಿ ಬಿಎಂಟಿಸಿಯೂ ಬಸ್ ಸೇವೆ ನೀಡುವ ಅಗತ್ಯವಿದೆ.

-ಸಿ.ಆರ್.ಜನಾರ್ದನ, ಎಫ್‌ಕೆಸಿಸಿಐ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News