ಟೆನಿಸ್ ಬೆಟ್ಟಿಂಗ್ ಹಗರಣದಲ್ಲಿ 135ಕ್ಕೂ ಅಧಿಕ ಆಟಗಾರರು ಭಾಗಿ: ವರದಿ

Update: 2019-12-16 18:39 GMT

ಬರ್ಲಿನ್,ಡಿ.16: ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರ-30ರಲ್ಲಿರುವ ಓರ್ವ ಆಟಗಾರ ಸೇರಿದಂತೆ 135ಕ್ಕೂ ಅಧಿಕ ಟೆನಿಸ್ ಆಟಗಾರರು ಅಂತರ್‌ರಾಷ್ಟ್ರೀಯ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜರ್ಮನಿ ಮಾಧ್ಯಮ ರವಿವಾರ ವರದಿ ಮಾಡಿದೆ.

ಆಟಗಾರರು ಎಫ್‌ಐಬಿ ಹಾಗೂ ಯುರೋಪ್‌ನ ಅಧಿಕಾರಿಗಳಿಂದ ಗಡಿಯಾಚೆಗಿನ ತನಿಖೆಗೆ ಒಳಪಟ್ಟಿದ್ದಾರೆ ಎಂದು ದಿನ ಪತ್ರಿಕೆ ‘ಡೈ ವೆಲ್ಟ್’ ಹಾಗೂ ಪ್ರಸಾರಕ ‘ಝೆಡ್‌ಡಿಫ್’ ಜಂಟಿಯಾಗಿ ವರದಿ ಮಾಡಿವೆ.

ನಾಲ್ಕು ಎಟಿಪಿ ಟೂರ್ ಪ್ರಶಸ್ತಿಗಳನ್ನು ಜಯಿಸಿ ಅಗ್ರ-30ರಲ್ಲಿ ಸ್ಥಾನ ಪಡೆದಿರುವ ಪುರುಷ ಆಟಗಾರನೂ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

‘‘ನಾವು ಅರ್ಮೇನಿಯ ಬೆಟ್ಟಿಂಗ್ ಮಾಫಿಯಾ ಜಾಲದ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಯುರೋಪಿನ ಏಳು ದೇಶಗಳಲ್ಲಿ ಹರಡಿದೆ. ದೊಡ್ಡ ಪ್ರಮಾಣದಲ್ಲಿ ಕುಶಲತೆಯಿಂದ ಕೂಡಿದೆ’’ ಎಂದು ಬೆಲ್ಜಿಯಂ ರಾಜ್ಯ ನಿಯೋಜಕ ಎರಿಕ್ ಬಿಶಾಪ್ ಅವರು ಜಿಡಿಎಫ್‌ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News