×
Ad

ಜ.3ಕ್ಕೆ ‘ಸಾವಿತ್ರಿಬಾಯಿ ಫುಲೆ’ ಜಯಂತಿ ಆಚರಣೆ: ಸುತ್ತೋಲೆ ಹೊರಡಿಸಲು ಶಿಕ್ಷಣ ಸಚಿವರ ಸೂಚನೆ

Update: 2019-12-20 20:55 IST

ಬೆಂಗಳೂರು, ಡಿ. 20: ‘ಸಾವಿತ್ರಿಬಾಯಿ ಫುಲೆ’ ಅವರ ಜಯಂತಿಯನ್ನು ಸಾರ್ವಜನಿಕ ಶಿಕ್ಷಣ ಆಶ್ರಯದಲ್ಲಿ ಜನವರಿ 3ರಂದು ಪ್ರತಿ ವರ್ಷವೂ ಆಚರಿಸಲು ಅಗತ್ಯ ಸುತ್ತೋಲೆ ಹೊರಡಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಧಾರವಾಡದ ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ಸಾವಿತ್ರಿಬಾಯಿ ಅವರ ಜಯಂತಿ ಆಚರಣೆ ಮಾಡಬೇಕೆಂದು ಕೋರಿ ಪತ್ರ ಬರೆದಿದ್ದು, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕುಗ್ರಾಮವೊಂದರಲ್ಲಿ 1831ನೆ ಜನವರಿ 3ರಂದು ಜನಿಸಿದ ಸಾವಿತ್ರಿಬಾಯಿ ಫುಲೆ ಅವರು ಮನೆಯಲ್ಲೇ ಶಾಲೆ ತೆರೆದು ಅಕ್ಷರ ಕ್ರಾಂತಿಯ ಕಹಳೆ ಊದಿದ ಮಹಾನ್ ಸಾಧಕಿ. ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯರ ಜನ್ಮದಿನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರತಿವರ್ಷವೂ ಆಚರಿಸಲು ಆದೇಶ ಹೊರಡಿಸಬೇಕೆಂದು ಮನವಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಚಿವ ಸುರೇಶ್‌ ಕುಮಾರ್ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News