ಮಂಜುನಾಥ ನಾಯಕ್
Update: 2019-12-20 21:15 IST
ಉಡುಪಿ, ಡಿ.20: ನಿವೃತ್ತ ಶಿಕ್ಷಕ ಅಲೆವೂರು ಮಂಜುನಾಥ ನಾಯಕ್ (81) ಅವರು ನಿನ್ನೆ ಅಲೆವೂರಿನ ತಮ್ಮ ಸ್ವಗೃಹದಲ್ಲಿ ನಿನ್ನೆ ನಿಧನರಾದರು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ವನ್ನು ಅಗಲಿದ್ದಾರೆ.
ಬುಡ್ನಾರು ಹಿರಿಯ ಪ್ರಾಥಮಿಕ ಶಾಲೆ, ಉಡುಪಿಯ ಕ್ರಿಶ್ಚಿಯನ್ ಪ್ರೌಢ ಶಾಲೆ ಹಾಗೂ ಅಲೆವೂರಿನ ನೆಹರೂ ಪ್ರೌಢ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅವರು ನಿವೃತ್ತರಾಗಿದ್ದರು. ಮಂಜುನಾಥ ನಾಯಕ್ ಅವರು ಬಂಟಕಲ್ಲಿನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾಗಿಯೂ ಸೇವೆ ಸಲ್ಲಿಸಿದ್ದರು.