ನಮ್ಮ ಇಂದಿಗೆ ಹೊಂದಿಸಿದ ಬ್ರೆಖ್ಟ್

Update: 2019-12-23 09:32 GMT

ಅದು

ಬರೀ ಐಡಿಯಾ ಆಗಿದ್ದು ಮಬ್ಬುಮ

ಬ್ಬಾಗಿದ್ದಾಗ ಅಬ್ಬಬ್ಬ ಅನ್ನೋರೆ

ಎಲ್ಲಾರೂ. ಮಕಮೂತಿ ಮೂಡಿ, ಜಾರಿ

ಶುರು ಆಯಿತೊ, ಲಬ ಲಬೋ ಲಬೋ

ಅದೇ ಸಲೀಸ್, ಅಲ್ವಾ?

ಆವತ್ತು ಜನರೆಲ್ಲಾ ಬೀದಿಗಿಳಿದ್ಮೇಲೆ, ಗವರ್ಮೆಂಟವರು ಪಾಂ

ಪ್ಲೆಟ್ ಹಂಚಿದರು, ಎಲ್ಲಾ ಕಡೇನೂ: ಜನಾ ಗವರ್ಮೆಂಟವರ

ನಂಬಿಕೆ ಕಳಕೊಂಡಿದಾರೆ, ಈಗದನ್ನ ತಿರ್ಗಾ, ಕಷ್ಟಾಪಟ್ಟು, ಸಂ

ಪಾದಿಸ್ಕೋಬೇಕವರು ಅಂತ. ಹಂಗಾರೆ, ಈ ಗವರ್ಮೆಂಟವರು,

ಒಟ್ಟು ಜನರನ್ನೇಯ ಬರ್ಖಾಸ್ತ್ ಮಾಡಿ, ಬೇರೆ, ಇನ್ನೊಂದೇ,

ಜನರನ್ನಾರಿಸ್ಕೊಳ್ಳೋದು... ಅದೇ ಇನ್ನೂ ಸಲೀಸ್‍, ಅಲ್ವಾ?

ನಾನು, ಉಳಕೊಂಡೋನು

ಹೌದು, ಗೊತ್ತದೆ: ನನ್ನದೃಸ್ಟ, ಅಸ್ಟೆ. ಎಸ್ಟೊಂದ್

ಜನ ಗೆಣ್ಕಾರ್ರ ಪೈಕಿ ಉಳ್ಕೊಂಡೋನ್ ನಾನೊಬ್ನೆ                                   

 

ನಿನ್ನೆ ರಾತ್ರಿ ಕನ್ಸಲ್ಲಿ ಅಂತೇವೊಬ್ಬ ಗೆಣ್ಕಾರ ಬಂದ, ‘ತಾಳ್ಕೊಂಡ್ಹೊಂ

ದ್ಕೊಂಡ್ಗಟ್‍ಮುಟ್ಟಿದ್ ತೂರ್ಕೊಂಡೋನು ಉಳಕೊಂಡ’ ಅಂದ…

 

ಹೇಸ್ಗೆ ಆಯ್ತದೆ ನನ್ ಕಂಡ್ರೆ ನಂಗೇ

ನನಿಗೆ ಹಿಂಗ್ಯಾಕ್ಮಾಡ್ತ್ಯಾ ನೀನುs?

ಮನೆವಳ್ಗಡೆ ಸಿಡುಬಮ್ಮನಿಂದ ಸಾವು.

ವರ್ಗಡೆ ಕಾಳ್ಗಿಚ್ಚಿನಿಂದ ಸಾವು. ಹಿಂ

ಗಾರೆ ನಾವು ಎಲ್ಗೋಗನಾ, ಏನ್ಮಾ

ಡನಾ, ಹೇಳಿ?... ನನ್ನ ಮಕದ್ಮೇಲೆ

ಹೇತುಬಿಟ್ಟವ್ಳೆ ಅವ್ಳು. ಅವ್ಳು ಅಂದ್ರೆ

ನನ್ನವ್ವ. ಅವ್ವಾ, ನನಿಗೆ ನನಿಗ್ಹಿಂಗ್ಯಾ

ಕ್ಮಾಡ್ತ್ಯವ್ವಾ ನೀನುs… ಜನನೀ? 

ಪದ್ಯಗಳ ಹೆಸರು, ಇಂಗ್ಲಿಶಿನಲ್ಲಿ, ಕ್ರಮವಾಗಿ: When It’s A Notion; The Solution; I, The Survivor; Germany 1945.

Writer - ರಘುನಂದನ

contributor

Editor - ರಘುನಂದನ

contributor

Similar News