ಯುವಜನತೆ ಸಾಹಿತ್ಯ, ಸಂಗೀತದ ಕಡೆ ಆಸಕ್ತಿ ವಹಿಸಿ: ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ

Update: 2019-12-22 18:06 GMT

ಬೆಂಗಳೂರು, ಡಿ.22: ಯುವಜನತೆ ಹಣದ ಹಿಂದೆ ಬೀಳದೆ ಸಾಹಿತ್ಯ, ಸಂಗೀತ ಕ್ಷೇತ್ರಗಳತ್ತ ಮುಖ ಮಾಡಬೇಕು ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಸಲಹೆ ನೀಡಿದ್ದಾರೆ.

ರವಿವಾರ ಬಬ್ಬೂರುಕಮ್ಮೆ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಬಳಗ ಕೂಟ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯುವಜನತೆ ಉನ್ನತ ಶಿಕ್ಷಣವನ್ನು ಪಡೆದು ವಿದೇಶಕ್ಕೆ ತೆರಳುತ್ತಿದ್ದಾರೆ. ಆದರೆ ಅವರನ್ನು ಇಲ್ಲಿಯೇ ಉಳಿಸಿಕೊಳ್ಳುವ ಕೆಲಸವಾಗಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅವರನ್ನು ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ತೊಡಗುವಂತೆ ಮಾಡಬೇಕು. ಈಗಿನ ಸಮಾಜದ ಬಗ್ಗೆ ಯುವಜನತೆ ಕೀಳರಿಮೆ ಹೊಂದಿದ್ದಾರೆ. ಸಮಾಜ ಏನು ಮಾಡಿದೆ ಎಂದು ಪ್ರಶ್ನಿಸುವ ಬದಲಿಗೆ ಸಮಾಜಕ್ಕೆ ತಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ಚಿಂತಿಸಬೇಕು ಎಂದರು.

ಆಧ್ಯಾತ್ಮ ಗುರು ದ್ವಾರಕಾನಾಥ್, ಕರೂರು ವೈಶ್ಯ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕ ಶ್ರೀನಾಥ್ ನರಸೀಪುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News