ಫೈರೋಝಾ ಖಾತೂನ್

Update: 2019-12-23 03:58 GMT

ಮಂಗಳೂರು, ಡಿ.23: ಬೋಳಾರ ಮುಳಿಹಿತ್ಲು ನಿವಾಸಿ ಅಲಿ ಅಹ್ಮದ್ ಹಾರೂನ್ ಅವರ ಪತ್ನಿ ಫೈರೋಝಾ ಖಾತೂನ್ ಸೋಮವಾರ ಮುಂಜಾನೆ 3:30ರ ಸುಮಾರಿಗೆ ಪುಣೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಕಾಪು ಮಲ್ಲಾರಿನ ದಿ. ಖಾಝಿ ಮುಹಮ್ಮದ್ ಹಸನ್ ಸಾಹೇಬ್ ಹಾಜಿಯವರ ಪುತ್ರಿಯಾಗಿರುವ ಮೃತರು ಪತಿ, ಓರ್ವ ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತದೇಹವನ್ನು ಇಂದು(ಡಿ.23) ರಾತ್ರಿ ಮಂಗಳೂರಿಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ