ಸಂಸದ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Update: 2019-12-23 12:45 GMT

ಮಂಗಳೂರು, ಡಿ.23: ಬಡವರು ಮತ್ತು ದಲಿತರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಅವರು ಆರೆಸ್ಸೆಸ್ ನವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೈಕಲ್ ಶಾಪ್ ನಲ್ಲಿ ಪಂಚರ್ ಹಾಕೋರು ಪೌರತ್ವದ ವಿರುದ್ಧ ಪ್ರತಿಭಟನೆ ಮಾಡುತ್ತಾರೆಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಮನೆಗೆ ಭೇಟಿ ನೀಡಲು ನಗರಕ್ಕೆ ಆಗಮಿಸಿದ ಅವರು, ಬಡವರು ಮತ್ತು ದಲಿತರ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಅವರು ಆರೆಸ್ಸೆಸ್ ನವರು. ಅವರಿಗೆ ಅಕ್ಷರ ಗೊತ್ತಿಲ್ಲಾ. ಬಡತನ ಕೂಲಿ ಮಾಡುವವರ ಬಗ್ಗೆ ಅವರಿಗೆ ಗೊತ್ತಿಲ್ಲ ಎಂದು ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದರು.

ಬಿಜೆಪಿಗೆ ಬಡವರು, ಅವಕಾಶ ವಂಚಿತರ ಬಗ್ಗೆ ಗೌರವ ಇಲ್ಲ. ಈ ಹೇಳಿಕೆಗೆ ಸಂಸದ ತೇಜಸ್ವಿ ಸೂರ್ಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News