×
Ad

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಬೃಹತ್ ಪ್ರತಿಭಟನೆ: ರಾಜಕೀಯ ನಾಯಕರು ಹೊರಕ್ಕೆ !

Update: 2019-12-23 22:10 IST

ಬೆಂಗಳೂರು, ಡಿ.23: 'ನಾವು ಭಾರತದ ಜನರು ಸಿಎಎ ಮತ್ತು ಎನ್‌ಆರ್‌ಸಿ ಅನ್ನು ತಿರಸ್ಕರಿಸಬೇಕೆಂದು' ಒತ್ತಾಯಿಸಿ ನಡೆದ ಬೃಹತ್ ಸಮಾವೇಶದಲ್ಲಿ ರಾಜಕೀಯ ನಾಯಕರನ್ನು ಹೊರಗಿಡಲಾಯಿತು.

ಸೋಮವಾರ ನಗರದ ಮಿಲ್ಲರ್ಸ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ಆಯೋಜಿಸಿದ್ದ, ಸಮಾವೇಶದಲ್ಲಿ ರಾಜಕೀಯ ನಾಯಕರಿಗೆ ಅವಕಾಶ ನೀಡಿರಲಿಲ್ಲ. ಆದರೂ, ವೇದಿಕೆ ಬಳಿಗೆ ಆಗಮಿಸಲು ಯತ್ನಿಸಿದ ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಅವರನ್ನು ಕಾರ್ಯಕ್ರಮದ ಆಯೋಜಕರು ತಡೆದರು. ಈ ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಬೇಡ ಎಂದು ಮನವಿ ಮಾಡಿದ ಹಿನ್ನೆಲೆ ಅವರು ವಾಪಸ್ಸು ಹೋದರು ಎಂದು ತಿಳಿದುಬಂದಿದೆ.

ಅದೇ ರೀತಿ, ಎಸ್‌ಡಿಪಿಐ, ಪಿಎಫ್‌ಐ ಸೇರಿದಂತೆ ಇನ್ನಿತರೆ ರಾಜಕೀಯ ನಾಯಕರಿಗೂ, ಮುಖಂಡರಿಗೂ ಆಹ್ವಾನ ನೀಡಿರಲಿಲ್ಲ. ಹಲವು ಬಿಬಿಎಂಪಿ ಸದಸ್ಯರು, ರಸ್ತೆ ಬದಿಯಲ್ಲಿಯೇ ಕೆಲ ಕಾಲ ನಿಂತು ವಾಪಸ್ಸು ಮನೆಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News