ಕಂಟ್ರಿ ಕ್ಲಬ್‌ನಿಂದ ಲಕ್ಷಾಂತರ ರೂ. ವಂಚನೆ: ಆರೋಪ

Update: 2019-12-23 17:07 GMT

ಬೆಂಗಳೂರು, ಡಿ.23: ಹೈದ್ರಾಬಾದಿನ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಆ್ಯಂಡ್ ಹಾಲಿಡೆನ್ ಕಂಪನಿಯು ಜನರಿಗೆ ಪ್ರವಾಸದ ಆಯೋಜನೆ ಮತ್ತು ಹೊಟೇಲ್ ಬುಕ್ಕಿಂಗ್ ಹಾಲಿಡೆ ಪ್ರೋಗ್ರಾಂಗಳನ್ನು ವ್ಯವಸ್ಥೆ ಮಾಡಿಸುತ್ತೇವೆ ಎಂದು ಜನರಿಂದ ಲಕ್ಷಗಟ್ಟಲೆ ಹಣವನ್ನು ಸದಸ್ಯತ್ವಕ್ಕಾಗಿ ಮತ್ತು ವೆಕೇಷನ್‌ಗಾಗಿ ಪಾವತಿಸಿಕೊಂಡು ವಂಚಿಸಿದೆ ಎಂದು ಮಾಹಿತಿ ಸೇವಾ ಸಮಿತಿ ಎನ್‌ಜಿಓನ ಅಧ್ಯಕ್ಷ ಬಿ.ಎ ಕೋಟೆಯಾರ್ ಆರೋಪಿಸಿದ್ದಾರೆ.

ಸೋಮವಾರ ಪ್ರೆಸ್‌ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಂಪನಿಯ ಸದಸ್ಯತ್ವಕ್ಕಾಗಿ ಮತ್ತು ವೆಕೇಷನ್‌ಗಾಗಿ ಹಲವಾರು ಜನರು ಕಳೆದ 25 ವರ್ಷಗಳಿಂದ ಹಣ ಕಟ್ಟಿದ್ದಾರೆ. ಪ್ರವಾಸ ಮತ್ತು ಕೊಠಡಿ ಹಾಗೂ ಇನ್ನಿತರೆ ಸೌಲಭ್ಯ ನೀಡುವುದಾಗಿ ತಿಳಿಸಿ, ಸುಮಾರು ಒಂದು ಸಾವಿರ ಕೋಟಿಗೂ ಅಧಿಕ ಹಣವನ್ನು ಹೈದ್ರಾಬಾದಿನ ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಆ್ಯಂಡ್ ಹಾಲಿಡೆನ್ ಕಂಪನಿಯು ವಂಚಿಸಿದೆ ಎಂದು ತಿಳಿಸಿದರು.

ಈ ಸಂಸ್ಥೆಯು ಒಂದು ಲಿಮಿಟೆಡ್ ಕಂಪನಿಯಾಗಿದ್ದು, ಯಾವುದೇ ಹಣವನ್ನು ಜನರಿಂದ ಪಡೆಯಬೇಕಾದರೆ ಆರ್‌ಬಿಐನಿಂದ ಅನುಮತಿ ಪಡೆಯಬೇಕು. ಆದರೆ, ಈ ಸಂಸ್ಥೆಯು ಯಾವುದೇ ಅನುಮತಿ ಪಡೆಯದೇ ಸುಳ್ಳು ಹೇಳಿ ಕಮಿಷನ್ ಪಡೆಯುತ್ತಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಹೈದರಾಬಾದಿನ ಕಂಟ್ರಿ ಕ್ಲಬ್‌ನ ಮುಂದೆ ಪ್ರತಿಭಟನೆ ಮಾಡಿ ಅಲ್ಲಿನ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News