ಮರ್ಸಿಡಿಸ್ ಬೆಂಝ್ ನಿಂದ ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಸೇವೆಗೆ ಚಾಲನೆ
ಬೆಂಗಳೂರು : ಭಾರತದ ಅತಿದೊಡ್ಡ ವಿಲಾಸಿ ಕಾರು ಉತ್ಪಾದಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಇಂದು ವಿನೂತನ ಬಗೆಯ "ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್" ಕಾರು ಸರ್ವೀಸ್ ಯೋಜನೆಯನ್ನು ಘೋಷಿಸಿದೆ. ಇದು ಗ್ರಾಹಕರ ಮಾಲಕತ್ವ ಅನುಭವವನ್ನು ವಿಸ್ತೃತಗೊಳಿಸುವ ಉದ್ದೇಶ ಹೊಂದಿದ್ದು, ಈ ಮೂಲಕ ವಿಲಾಸಿ ಕಾರು ವಲಯದಲ್ಲಿ ಮಾರಾಟ ನಂತರದ ಅನುಭವವನ್ನು ವಿಶಿಷ್ಟವನ್ನಾಗಿ ಮಾಡಲಾಗಿದೆ.
ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್, ಮರ್ಸಿಡಿಸ್ ಬೆಂಝ್ನ ಕ್ಷಮತೆಯ ದೃಷ್ಟಿಕೋನದ ವಿನೂತನ ಯೋಜನೆಯಾಗಿದ್ದು, ಇದು ಮರ್ಸಿಡಿಸ್ ಬೆಂಝ್ ವಾಹನಗಳ ಸರ್ವೀಸಿಂಗ್ ಸೇವೆಯನ್ನು ಮೂರು ಗಂಟೆಗಳಲ್ಲಿ ಪೂರ್ಣಗೊಳಿಸುವಂತೆ ಮಾಡುತ್ತದೆ. ಈ ವಿನೂತನ ಪರಿಕಲ್ಪನೆಯನ್ನು, ಸರ್ವೀಸ್ ಕೇಂದ್ರದೊಳಗೆ ವಿಶೇಷವಾದ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ ಜಾರಿಗೊಳಿಸುವುದು ಸಾಧ್ಯವಾಗಿದೆ.
ಮುಖ್ಯವಾಗಿ ವಿಶೇಷವಾದ ಬೇಗಳು, ವಿಶೇಷ ಸಾಧನ- ಸಲಕರಣೆಗಳು ಸೇರಿದ್ದು, ಇದರ ಜತೆಗೆ ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್‍ಗಾಗಿ ಒಬ್ಬರು ಟೀಮ್ ಲೀಡರ್ ಹಾಗೂ ಇಬ್ಬರು ಪ್ರಮಾಣಿತ ನಿರ್ವಹಣಾ ತಂತ್ರಜ್ಞರನ್ನು ಮೀಸಲಿಡಲಾಗಿದೆ. ಇದರಿಂದಾಗಿ ದಿನವಿಡೀ ತ್ವರಿತ ಸರ್ವೀಸಿಂಗ್ ಸಾಧ್ಯವಾಗಲಿದೆ. ಈ ಸೇವೆಯು ಬೆಂಗಳೂರಿನಲ್ಲಿ ಇದೀಗ ಲಭ್ಯವಿದ್ದು, ಶೀಘ್ರವೇ ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಅಹ್ಮದಾಬಾದ್‍ಗಳಲ್ಲೂ ಆರಂಭಿಸಲಾಗುತ್ತಿದೆ. ಆದರೆ ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್‍ನಲ್ಲಿ ಪ್ರಮುಖ ಸರ್ವೀಸ್ ಮತ್ತು ದುರಸ್ತಿಗಳು, ವಾರೆಂಟಿ ದುರಸ್ತಿಗಳು ಅಥವಾ ವಿಶೇಷ ಎಎಂಜಿ ವಾಹನಗಳ ಸರ್ವೀಸ್ ಸೇರಿರುವುದಿಲ್ಲ.
ಇದರಿಂದಾಗಿ ಗ್ರಾಹಕರಿಗೆ ಆಗುವ ಪ್ರಮುಖ ಲಾಭವೆಂದರೆ ವಾಹನದ ನಿರ್ವಹಣೆಗಾಗಿ ಸರ್ವೀಸಿಂಗ್‍ನ ಸರಾಸರಿ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಇಷ್ಟು ಮಾತ್ರವಲ್ಲದೇ, ಸರ್ವೀಸ್ ಸೆಂಟರ್ ಗೆ ಗ್ರಾಹಕರು ಒಂದು ಬಾರಿ ಮಾತ್ರ ವಾಹನದೊಂದಿಗೆ ಸರ್ವೀಸಿಂಗ್ ಉದ್ದೇಶಕ್ಕಾಗಿ ಪ್ರಯಾಣಿಸಿದರೆ ಸಾಕಾಗುತ್ತದೆ.
ಈ ಬಗ್ಗೆ ವಿವರ ನಿಡಿದ ಮರ್ಸಿಡಿಸ್ ಬೆಂಝ್ ಇಂಡಿಯಾದ ಗ್ರಾಹಕ ಸೇವೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷ ಶೇಖರ್ ಭಿಡೆ, "ಭಾರತದಲ್ಲಿ ಒಂದು ವಾಹನ ಬ್ರಾಂಡ್‍ನ ಅದರಲ್ಲೂ ಮುಖ್ಯವಾಗಿ ವಿಲಾಸಿ ಕಾರು ಬ್ರಾಂಡ್‍ನ ಧೀರ್ಘಾವಧಿ ಯಶಸ್ಸು, ಅದರ ಸೇವಾ ಶ್ರೇಷ್ಠತೆಯಿಂದ ಮತ್ತು ಗ್ರಾಹಕರಿಗೆ ಒದಗಿಸುವ ಸುಲಲಿತವಾದ ಮಾಲಕತ್ವ ಅನುಭವದಿಂದ ನಿರ್ಧಾರವಾಗುತ್ತದೆ. ಗ್ರಾಹಕರ ನಿಷ್ಠೆಯನ್ನು ಸಂಭ್ರಮಿಸುವ, ವಿಶೇಷ ಹಾಗೂ ಶ್ರೇಷ್ಠಮಟ್ಟದ ಸರ್ವೀಸ್ ಅನುಭವದ ಮೂಲಕ ಗೆಲ್ಲಬಹುದು ಎನ್ನುವುದು ಮರ್ಸಿಡಿಸ್ ಬೆಂಝ್ನ ನಂಬಿಕೆಯಾಗಿದೆ.
ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಆರಂಭದೊಂದಿಗೆ, ಕಾರು ಸರ್ವೀಸಿಂಗ್‍ಗೆ ತಗಲುವ ಅವಧಿಯನ್ನು ಮೂರು ಗಂಟೆಗೆ ಇಳಿಸಲು ಸಾಧ್ಯವಾಗಲಿದೆ ಈ ಮೂಲಕ ವೇಗದ ಜೀವನ ಶೈಲಿಯ ನಮ್ಮ ಗ್ರಾಹಕರ ಅಮೂಲ್ಯ ಸಮಯವನ್ನು ಉಳಿಸಬಹುದಾಗಿದೆ. ಭಾರತದಲ್ಲಿ ನಮ್ಮ ಪ್ರಗತಿ ಕಾರ್ಯತಂತ್ರದಲ್ಲಿ ಮಾರಾಟೋತ್ತರ ಅಂಶಗಳು ಪ್ರಮುಕ ಪಾತ್ರ ವಹಿಸುತ್ತವೆ. ಈ ವಿನೂತನ ಕ್ರಮವು ಹಲವು ದಶಕಗಳಿಂದ ನಮ್ಮ ಗ್ರಾಹಕರಿಂದ ಪಡೆದುಕೊಂಡ ನಮ್ಮ ಬ್ರಾಂಡ್ ಬಗೆಗಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಧ್ಯವಾಗಲಿದೆ. 2020ನೇ ವರ್ಷದಲ್ಲಿ ಕ್ಷಮತೆಗೆ ಗಮನ ಮತ್ತು ಗ್ರಾಹಕ ಸೇವೆಗಳಿಗೆ ಉಳಿಸಿಕೊಳ್ಳುವಿಕೆಯು ನಮ್ಮ ಪ್ರಮುಖ ಕಾರ್ಯತಂತ್ರವಾಗಿದೆ" ಎಂದು ವಿವರಿಸಿದರು.
ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್‍ನಲ್ಲಿ ಒಳಗೊಳ್ಳುವ ಸೇವೆಗಳು
ಸರ್ವೀಸ್ ಎ ಟೈಪ್: ಆಯಿಲ್ ಮತ್ತು ಆಯಿಲ್ ಫಿಲ್ಟರ್ ತಪಾಸಣೆ ಮತ್ತು ಬದಲಾವಣೆ, ಬ್ರೇಕ್ ಫ್ಲೂಯಿಡ್ ಬದಲಾವಣೆ, ಧೂಳಿನ ಫಿಲ್ಟರ್ ಬದಲಾವಣೆ, ವ್ಹೀಲ್ ರೊಟೇಶನ್, ಕೂಲಂಟ್- ಆ್ಯಂಟಿ ಫ್ರೀಜ್ ಮಿಶ್ರಣ ಅನುಪಾತ ತಪಾಸಣೆ, ವಾಷಿಂಗ್, ಆಂತರಿಕ ಮತ್ತು ಬಾಹ್ಯ ಸ್ವಚ್ಛತೆ.
ಸರ್ವೀಸ್ ಬಿ ಟೈಪ್: ಆಯಿಲ್ ಮತ್ತು ಆಯಿಲ್ ಫಿಲ್ಟರ್ ತಪಾಸಣೆ ಮತ್ತು ಬದಲಾವಣೆ, ಬ್ರೇಕ್ ಫ್ಲೂಯಿಡ್ ಬದಲಾವಣೆ, ಧೂಳಿನ ಫಿಲ್ಟರ್ ಬದಲಾವಣೆ, ವ್ಹೀಲ್ ರೊಟೇಶನ್, ಕೂಲಂಟ್- ಆ್ಯಂಟಿ ಫ್ರೀಜ್ ಮಿಶ್ರಣ ಅನುಪಾತ ತಪಾಸಣೆ, ವಾಷಿಂಗ್, ಆಂತರಿಕ ಮತ್ತು ಬಾಹ್ಯ ಸ್ವಚ್ಛತೆ. ಡೀಸೆಲ್ ಇಂಧನ ಫಿಲ್ಟರ್, ಬ್ರೇಕ್ ಡಿಸ್ಕ್ ಮತ್ತು ಬ್ರೇಕ್ ಪ್ಯಾಡ್, ವ್ಹೀಲ್ ಬ್ಯಾಲೆನ್ಸಿಂಗ್.
ಪ್ರಿಮಿಯರ್ ಎಕ್ಸ್ ಪ್ರೆಸ್ ಪ್ರೈಮ್ ಬಗೆಗಿನ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ ಅಥವಾ ಕರೆ ಮಾಡಿ: ಮರ್ಸಿಡಿಸ್ ಬೆಂಝ್ ಸುಂದರಮ್ ಮೋಟಾರ್ಸ್ +91-9148155175. ಇ-ಮೇಲ್: Panchajanya.c@sundarammotors.com