ಹೊಸ ವರ್ಷಾಚರಣೆ ಸಂಭ್ರಮ: ಮಧ್ಯರಾತ್ರಿವರೆಗೆ ಮೆಟ್ರೋ ವಿಸ್ತರಣೆ

Update: 2019-12-23 18:14 GMT

ಬೆಂಗಳೂರು, ಡಿ.23: ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಧ್ಯರಾತ್ರಿ 2 ಗಂಟೆವರೆಗೂ ಮೆಟ್ರೋ ರೈಲು ಸಂಚಾರಕ್ಕೆ ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ವಿವಿಧ ಪ್ರದೇಶಗಳಿಂದ ಜನರು ನಗರದ ಹಲವು ಭಾಗಗಳಿಗೆ ತೆರಳಿರುತ್ತಾರೆ. ಹೀಗಾಗಿ, ರಾತ್ರಿ 2 ಗಂಟೆವರೆಗೂ ರೈಲು ಸಂಚಾರಕ್ಕೆ ನಿರ್ಧರಿಸಲಾಗಿದೆ. ಆದರೆ, ಅತಿಯಾಗಿ ಮದ್ಯಸೇವಿಸಿ ರೈಲಿನಲ್ಲಿ ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿದೆ.

ಸಾಮಾನ್ಯ ದಿನಗಳಲ್ಲಿಯೇ ಕೆಲವರು ಮದ್ಯಸೇವಿಸಿ ಮೆಟ್ರೋನಲ್ಲಿ ಸಂಚರಿಸುತ್ತಾರೆ, ಆಗ ಯಾರನ್ನೂ ತಡೆದಿಲ್ಲ. ಆದರೆ, ಮದ್ಯಪಾನಿಗಳ ಪ್ರಯಾಣಕ್ಕೆ ಅವಕಾಶ ನೀಡಬಾರದು ಎಂದು ದೂರುಗಳು ಬಂದಿವೆ. ಇದನ್ನು ಪರಿಶೀಲನೆ ನಡಸುತ್ತಿದ್ದು, ಸದ್ಯಕ್ಕೆ ಹೊಸ ವರ್ಷಾಚರಣೆಯ ದಿನದಂದು ಕುಡುಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News