'ಪಟ್ಟಭದ್ರ ಹಿತಾಸಕ್ತಿಗಳ ಸಂಚು': ಕೇರಳದಲ್ಲಿ ಕಾರಿಗೆ ಮುತ್ತಿಗೆ ಹಾಕಿದ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯೆ
ಬೆಂಗಳೂರು, ಡಿ.24: ಕೇರಳಕ್ಕೆ ತೆರಳಿದ್ದ ವೇಳೆ ತನ್ನ ಕಾರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಘೋಷಣೆ ಕೂಗಿದ ಘಟನೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, 'ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಂಚು' ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು "ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯುಕ್ತಿಕ ಭೇಟಿ. ಕೆಲವರ ಕುಕೃತ್ಯಕ್ಕೆ ಎಲ್ಲ ಕೇರಳಿಗರನ್ನೂ ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ" ಎಂದು ಅವರು ಹೇಳಿದ್ದಾರೆ.
ವಿವಿಧ ದೇವಾಲಯಗಳಿಗೆ ಭೇಟಿ ನೀಡಲೆಂದು ಕೇರಳಕ್ಕೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರಿಗೆ ಕಣ್ಣೂರಿನಲ್ಲಿ ವಿವಿಧ ಸಂಘಟನೆಗಳು ಕಾರ್ಯಕರ್ತರು ಮುತ್ತಿಗೆ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿದ್ದಲ್ಲದೇ ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಂಚು. ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯುಕ್ತಿಕ ಭೇಟಿ. ಕೆಲವರ ಕುಕೃತ್ಯಕ್ಕೆ ಎಲ್ಲ ಕೇರಳಿಗರನ್ನೂ ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ.#kerala
— B.S. Yediyurappa (@BSYBJP) December 24, 2019