×
Ad

ಬೆಂಗಳೂರು ಬ್ಯಾರಿ ಜಮಾತ್ ಅಧ್ಯಕ್ಷರಾಗಿ ಇಬ್ರಾಹಿಂ ಎಚ್. ಇನೋಳಿ ಆಯ್ಕೆ

Update: 2019-12-24 22:31 IST

ಬೆಂಗಳೂರು, ಡಿ.26: ಬೆಂಗಳೂರು ಬ್ಯಾರಿ ಜಮಾತ್ 2019-23 ಸಾಲಿಗೆ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಎಚ್. ಇನೋಳಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಆರ್.ಟಿ.ನಗರದಲ್ಲಿ ಜಮಾತ್ ಅಧ್ಯಕ್ಷ ಎ.ಬಿ.ಮುಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಜಮಾತಿನ ತ್ರೈವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಪದಾಧಿಕಾರಿಗಳು: ಡಾ.ಅಬ್ದುಲ್ ಹಮೀದ್ ತೋಡಾರ್(ಉಪಾಧ್ಯಕ್ಷರು), ಸವಾದ್.ಎಂ ಕುಂಞಿ ಉಜಿರೆ(ಪ್ರಧಾನ ಕಾರ್ಯದರ್ಶಿ), ರಿಯಾಝ್ ಪಾಣೆಮಂಗಳೂರು ಮತ್ತು ಮುಹಮ್ಮದ್ ರಫೀಕ್ ಕೊಡ್ಲಿಪೇಟೆ (ಕಾರ್ಯದರ್ಶಿಗಳು), ಅಹ್ಮದ್ ಶರೀಫ್ ಎಚ್.ಪಿ. ವಗ್ಗ(ಕೋಶಾಧಿಕಾರಿ), ನಾಸಿರ್ ಹುಸೈನ್ ಪೊಲ್ಯ(ಆಂತರಿಕ ಲೆಕ್ಕಪರಿಶೋಧಕ), ನ್ಯಾಯವಾದಿ ಅಬ್ದುಲ್ ಲತೀಫ್ ಈಶ್ವರಮಂಗಲ(ಕಾನೂನು ಸಲಹೆಗಾರ).

ಹೈದರ್ ಹಾಜಿ ಜೋಕಟ್ಟೆ(ಕನ್ವೀನರ್, ಆರ್ಥಿಕ ಸಂಪನ್ಮೂಲ ಕ್ರೋಡೀಕರಣ), ಎ.ಬಿ ಮುಹಮ್ಮದ್(ಕನ್ವೀನರ್, ಸಂಚಾರ ವ್ಯವಸ್ಥೆ), ಇಬ್ರಾಹೀಮ್ ಎ ಜೋಕಟ್ಟೆ, ಹುಸೈನ್ ಎಂ ಸಿರಾಝ್(ಮದ್ರಸ ಮೇಲ್ವಿಚಾರಕರು), ಎನ್.ಅಬ್ದುಲ್ ಹಕೀಮ್(ಕನ್ವೀನರ್, ಲೆಕ್ಕಪತ್ರ), ರಿಯಾಝ್ ಪಾಣೆಮಂಗಳೂರು ಮತ್ತು ಮುಹಮ್ಮದ್ ರಿಝ್ವನ್(ಮೇಲುಸ್ತವಾರಿಗಳು, ಯುವ ಘಟಕ), ಅಹ್ಮದ್ ಶೆರೀಫ್ ವಗ್ಗ(ಕನ್ವೀನರ್ ಮಜ್ಲಿಸುನ್ನೂರ್ ನಿರ್ವಹಣೆ) ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News