ಸೂರ್ಯಗ್ರಹಣ ವೀಕ್ಷಣಗೆ ಸಾರ್ವಜನಿಕ ಕಾರ್ಯಕ್ರಮ: ಮನರಂಜನೆ ಜತೆ ಉಪಾಹಾರ ವ್ಯವಸ್ಥೆ
Update: 2019-12-25 23:09 IST
ಬೆಂಗಳೂರು, ಡಿ. 25: ಆಗಸದಲ್ಲಿ ಸಂಭವಿಸಲಿರುವ ಅಪರೂಪ-ಅವಿಸ್ಮರಣೀಯ ಸೂರ್ಯಗ್ರಹಣ ಸಾರ್ವಜನಿಕ ವೀಕ್ಷಣೆಯನ್ನು ಪ್ರೋತ್ಸಾಹಿಸಲು ಮೂಢನಂಬಿಕೆ ವಿರೋಧಿ ಒಕ್ಕೂಟವು ನಾಳೆ(ಡಿ.26) ಬೆಳಗ್ಗೆ 9ರಿಂದ 10ಗಂಟೆವರೆಗೆ ಪುರಭವನದ ಮುಂಭಾಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವರಾದ ಬಿ.ಟಿ. ಲಲಿತಾನಾಯಕ್, ಪಿಜಿಆರ್ ಸಿಂಧ್ಯಾ, ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ನಿವೃತ್ತ ಐಪಿಎಸ್ ಅಧಿಕಾರಿ ಸುಭಾಶ್ ಭರಣಿ, ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮಿನಾರಾಯಣ ನಾಗವಾರ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಬಿಸಿಬೇಳೆ ಬಾತ್, ಇಡ್ಲಿ-ವಡಾ, ಸಮೋಸ, ಹಣ್ಣು, ಚುರುಮುರಿ ಮತ್ತು ಇತರೆ ತಿನಿಸುಗಳನ್ನು ಸೂರ್ಯಗ್ರಹಣದ ವೇಳೆ ವಿತರಿಸಲಾಗುವುದು. ಇದೇ ವೇಳೆ ಇಂಡಿಯನ್ ಫೋಕ್ ಬ್ಯಾಂಡ್‌ನಿಂದ ಮನರಂಜನೆಯನ್ನೂ ಆಯೋಜಿಸಲಾಗಿದೆ ಎಂದು ಒಕ್ಕೂಟದ ನರಸಿಂಹಮೂರ್ತಿ ತಿಳಿಸಿದ್ದಾರೆ.