×
Ad

ಫೋರ್ಟಿಸ್ ಹಾಸ್ಪಿಟಲ್‌ನ ವೈದ್ಯರಿಂದ ಯಶಸ್ವಿ ನಿಯೋ ಬ್ಲಾಡರ್ ಶಸ್ತ್ರಚಿಕಿತ್ಸೆ

Update: 2019-12-26 23:58 IST

ಬೆಂಗಳೂರು, ಡಿ.26: ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಹಾಸ್ಪಿಟಲ್‌ನ ವೈದ್ಯರ ತಂಡವು ಮೋಫಿಲಿಯಾ ರೋಗದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ನಿಯೋ-ಬ್ಲಾಡರ್‌ನೊಂದಿಗೆ ವಿಶ್ವದ ಮೊದಲ ಸಿಸ್ಟೆಕ್ಟು ಪುನರ್‌ನಿರ್ಮಾಣ ಸರ್ಜರಿಯನ್ನು ಯಶಸ್ವಿಯಾಗಿ ನೆರವೇರಿಸಿದೆ.

ಫೋರ್ಟಿಸ್ ಹಾಸ್ಪಿಟಲ್ಸ್‌ನ ಯೂರಾಲಜಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ ನೇತೃತ್ವದ ವೈದ್ಯರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದೆ. ಇದು ಇಲ್ಲಿನ ವೈದ್ಯರು ನಡೆಸಿರುವ 9 ನೇ ಶಸ್ತ್ರಚಿಕಿತ್ಸೆಯಾಗಿದೆ. ಯೂರಾಲಜಿ ಮತ್ತು ಆರ್ಥೋಪೆಡಿಕ್ಸ್ ವಿಭಾಗದ ವೈದ್ಯರು ಇಡೀ ಮೊಣಕಾಲನ್ನು ಬದಲಾವಣೆ ಮತ್ತು ಆಂಟಿರಿಯರ್ ಕ್ರುಸಿಯೇಟ್ ಲಿಗಮೆಂಟ್(ಎಸಿಎಲ್) ಪುನರ್‌ನಿರ್ಮಾಣ ಮಾಡಿದರು. ಈ ಶಸ್ತ್ರಚಿಕಿತ್ಸೆ ನಂತರ ಕೇವಲ ಎರಡು ದಿನಗಳಲ್ಲಿ ಮೋಫೋಲಿಯಾ ರೋಗಿಯು ಸಹಜ ಸ್ಥಿತಿಗೆ ಬರುವಂತೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News