ಯುಎಇ: ಭಾರತೀಯ ಮೂಲದ ಸಾಮಾಜಿಕ ಕಾರ್ಯಕರ್ತ ನಝರ್ ನಾಂದಿ ಇನ್ನಿಲ್ಲ

Update: 2019-12-29 17:26 GMT
ಫೋಟೊ ಕೃಪೆ: facebook.com/photo

ದುಬೈ,ಡಿ.29: ತನ್ನ ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಯುಎಇ ಹಾಗೂ ಭಾರತದಲ್ಲಿನ ಹಲವಾರು ಮಂದಿಯ ಸಂಕಷ್ಟಗಳಿಗೆ ಸ್ಪಂದಿಸಿದ ಭಾರತೀಯ ಮೂಲದ ಖ್ಯಾತ ಸಾಮಾಜಿಕ ಕಾರ್ಯಕರ್ತ ನಝರ್ ನಾಂದಿ ರವಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

50ರ ಹರೆಯದ ನಾಂದಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ರವಿವಾರ ಬೆಳಗ್ಗೆ ಕೊನೆಯುಸಿರೆಳೆದರೆದಂದು ಅಧಿಕೃತ ಮೂಲಗಳು ತಿಳಿಸಿವೆ.

ಕೇರಳ ಮೂಲದ ನಝರ್ ಅವರು, ಯುಎಇನಲ್ಲಿ ನಿಧನರಾದ ಭಾರತೀಯರು ಸೇರಿದಂತೆ ಹಲವಾರು ಅನಿವಾಸಿಗಳ ಪಾರ್ಥಿವ ದೇಹವನ್ನು ತಾಯ್ನಾಡಿಗೆ ಸಾಗಿಸಲು ಸ್ವಯಂಸ್ಫೂರ್ತಿಯಿಂದ ನೆರವಾಗುತ್ತಿದ್ದರು. ರೋಗಿಗಳ ಚಿಕಿತ್ಸೆಗೂ ಅವರು ಸಹಾಯ ಹಸ್ತ ಚಾಚುತ್ತಿದ್ದರು. ವೀಸಾ ನಿಯಮಗಳ ಉಲ್ಲಂಘನೆಯ ಆರೋಪಗಳಿಗಾಗಿ ಕ್ಷಮಾದಾನ ಕೋರುವವರು ಹಾಗೂ ವಿದೇಶಿ ನೆಲದಲ್ಲಿ ತೊಂದರೆಗೆ ಸಿಲುಕಿಕೊಂಡವರಿಗೂ ಅವರು ನೆರವಾಗುತ್ತಿದ್ದರು.

ದುಬೈ ಪೊಲೀಸ್ ಹಾಗೂ ದುಬೈನಲ್ಲಿನ ಭಾರತೀಯ ರಾಯಭಾರಿ ಕಚೇರಿ ಹಮ್ಮಿಕೊಳ್ಳುತ್ತಿದ್ದ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಂಬಲ ನೀಡುತ್ತಿದ್ದರು.ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಸಂದರ್ಭದಲ್ಲಿ ನಡೆದ ಪರಿಹಾರ ಕಾರ್ಯಾಚರಣೆ ಹಾಗೂ ಸಂತ್ರಸ್ತರಿಗೆ ಅವಶ್ಯ ಸಾಮಾಗ್ರಿಗಳ ಪೂರೈಕೆಯಲ್ಲೂ ನಝರ್ ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News