×
Ad

ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪ: ಕಾಮನ್‌ವೆಲ್ತ್ ಮಾಜಿ ಆಟಗಾರ ಸೇರಿ 6 ಮಂದಿ ಬಂಧನ

Update: 2019-12-30 20:15 IST

ಬೆಂಗಳೂರು, ಡಿ.30: ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪದಡಿ ಕಾಮನ್‌ವೆಲ್ತ್ ಮಾಜಿ ಆಟಗಾರ ಸೇರಿ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಅಸ್ಲಾಂ ಗುತ್ತಲ್(45) ಧರ್ಮಣ್ಣ ದೇವಲಪ್ಪಚೌಹಣ್(38), ಮೈಸೂರಿನ ಝಾವೀದ್ ಖಾನ್(39), ಹುಬ್ಬಳ್ಳಿ ನಿವಾಸಿ ರಾಯಣ್ಣ ಗೌಡ (27), ಬಿಸ್ಮಿಲ ನಗರದ ರಿಝ್ವನ್(39) ಮಾರತ್ ಹಳ್ಳಿ ನಿವಾಸಿ ರೋಹನ್ ಮಂಡಲ್(27) ಬಂಧಿತ ಆರೋಪಿಗಳೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಆಟಗಾರ: ಗ್ಯಾಂಗ್‌ನ ಲೀಡರ್ ಹಾವೇರಿ ಮೂಲದ ಅಸ್ಲಂ ಗುತ್ತಲ್, ಬಾಸ್ಕೆಟ್‌ ಬಾಲ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡದ ಪರ ಆಡಿದ್ದನು. ಬಳಿಕ, ಪಶ್ಚಿಮ ಬಂಗಾಳ, ಬಿಹಾರದ ಮೂಲಕ ಅಕ್ರಮವಾಗಿ ಪಿಸ್ತೂಲ್ ಆಮದು ಮಾಡಿಕೊಂಡು, ತನ್ನದೇ ಗುಂಪು ಕಟ್ಟಿಕೊಂಡು, ಕಡಿಮೆ ಬೆಲೆಗೆ ರೌಡಿಗಳಿಗೆ ಪಿಸ್ತೂಲು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಅಸ್ಲಾಂ ಮೇಲೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ನಾಲ್ಕು ಶಸ್ತ್ರಾಸ್ತ್ರ ಕಾಯ್ದೆ ಜೊತೆ 8 ಪ್ರಕರಣಗಳು ದಾಖಲಾಗಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರಿಂದ ಮೂರು ಪಿಸ್ತೂಲ್, ಒಂದು ರಿವಾಲ್ವರ್ ಎಂಟು ಜೀವಂತ ಮದ್ದು ಗುಂಡುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಭಾಸ್ಕರ್ ರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News