ನಾಲ್ಕು ದಿನಗಳ ಟೆಸ್ಟ್ ಕಡ್ಡಾಯಗೊಳಿಸಲು ಐಸಿಸಿ ಗಂಭೀರ ಚಿಂತನೆ

Update: 2019-12-31 13:49 GMT

ಮೆಲ್ಬೋರ್ನ್, ಡಿ.30: ಬಿಡುವಿಲ್ಲದ ವೇಳಾಪಟ್ಟಿಯಿಂದ ಮುಕ್ತಿ ಪಡೆಯುವ ಸಲುವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ 2023ರಿಂದ ನಾಲ್ಕು ದಿನಗಳ ಟೆಸ್ಟ್ ಪಂದ್ಯವನ್ನು ಕಡ್ಡಾಯಗೊಳಿಸಲು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನಿರ್ಧರಿಸಿದೆ.

2023-2031ನೇ ವೃತ್ತದಲ್ಲಿ ಟೆಸ್ಟ್ ಪಂದ್ಯವನ್ನು ಐದು ದಿನಗಳಿಂದ ನಾಲ್ಕು ದಿನಗಳಿಗೆ ಕಡಿತಗೊಳಿಸಲು ಐಸಿಸಿ ಕ್ರಿಕೆಟ್ ಸಮಿತಿಯು ಅಧಿಕೃತವಾಗಿ ಪರಿಗಣಿಸಿದೆ.

 ನಾಲ್ಕು ದಿನಗಳ ಟೆಸ್ಟ್ ಹೊಸ ಕಲ್ಪನೆಯೇನಲ್ಲ. ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಮಧ್ಯೆ ಈ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾ ಹಾಗೂ ಝಿಂಬಾಬ್ವೆ 2017ರಲ್ಲಿ 4 ದಿನಗಳ ಟೆಸ್ಟ್ ಪಂದ್ಯವನ್ನು ಆಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News