ವಿವಿಧ ಅಪರಾಧ ಪ್ರಕರಣ: 70 ಮಂದಿಯ ಬಂಧನ, 1.48 ಕೋಟಿ ಮೌಲ್ಯದ ಮಾಲು ಜಪ್ತಿ

Update: 2019-12-31 14:12 GMT

ಬೆಂಗಳೂರು, ಡಿ.31: ಮನೆಗಳವು ಸೇರಿದಂತೆ ವಿವಿಧ ಗಂಭೀರ ಅಪರಾಧ ಪ್ರಕರಣ ಸಂಬಂಧ 70 ಜನರನ್ನು ಬಂಧಿಸಿರುವ ಇಲ್ಲಿನ ಆಗ್ನೇಯ ವಿಭಾಗದ ಪೊಲೀಸರು, 1 ಕೋಟಿ 48 ಲಕ್ಷ ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ.

ಬಂಧಿತರಿಂದ 1 ಕೆಜಿ 72 ಗ್ರಾಂ ಚಿನ್ನ, 975 ಗ್ರಾಂ ಬೆಳ್ಳಿ, 10.88 ಲಕ್ಷ  ನಗದು, 39 ಮೊಬೈಲ್‌ಗಳು, 66 ಕೆಜಿ ಗಾಂಜಾ, 26 ಲ್ಯಾಪ್‌ಟಾಪ್, 31 ಬೈಕ್, 2 ಕಾರು, 1 ಆಟೊ, 1 ಟಿಟಿ ಸೇರಿ 1 ಕೋಟಿ 48 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.

ಮಡಿವಾಳ ಪೊಲೀಸರು ತಮಿಳುನಾಡು ಮೂಲದ ಮನೋಹರ್ (21), ಲೋಗನಾಥನ್ (19), ಕಾರ್ತಿಕ್ (19), ಸೂರ್ಯ (19), ಗೋಕುಲನಾಥನ್ (19) ಅವರಲ್ಲದೆ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿ 20 ಲಕ್ಷ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಪ್ರಾಪ್ತ ಬಾಲಕರಿಂದ 1 ಲಕ್ಷ ಮೌಲ್ಯದ 5 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News