ಬಿಬಿಎಂಪಿ ಆಸತ್ರೆಗಳಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿಗೆ ಒಂದು ಲಕ್ಷ ರೂ. ಬಾಂಡ್
Update: 2019-12-31 21:40 IST
ಬೆಂಗಳೂರು, ಡಿ.31: ಮಂಗಳವಾರ (ಡಿ.31) ಮಧ್ಯರಾತ್ರಿ 12 ಗಂಟೆಯಿಂದ ಮಾರ್ಚ್‌ವರೆಗೆ ಬಿಬಿಎಂಪಿ ಹೆರಿಗೆ ಆಸತ್ರೆಗಳಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿಗೆ ಒಂದು ಲಕ್ಷ ರೂ. ಬಾಂಡ್ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಬಿಬಿಎಂಪಿ, ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಇಲ್ಲದೇ ಜನಿಸಿದ ಹೆಣ್ಣು ಮಗುವಿಗೆ ಒಂದು ಲಕ್ಷ ಬಾಂಡ್ ಸಿಗಲಿದೆ. ಇದುವರೆಗೆ ಬಿಪಿಎಲ್ ಕಾರ್ಡ್ ಇದ್ದ ಮಹಿಳೆಗೆ ಈ ಸೌಲಭ್ಯ ಇತ್ತು. ಈ ಬಾರಿಯಿಂದ ಎಪಿಎಲ್ ಸೇರಿ ಎಲ್ಲ ವರ್ಗದವರಿಗೂ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಈ ಮೊದಲು ‘ಪಿಂಕ್ ಬೇಬಿ’ ಎಂಬ ಹೆಸರಿನಲ್ಲಿ ಬಾಂಡ್ ನೀಡಲಾಗುತ್ತಿತ್ತು. ಇದೀಗ ಅದನ್ನು ಮಹಾಲಕ್ಷ್ಮೀ ಯೋಜನೆ ಎಂದು ಬದಲಾಯಿಸಲಾಗಿದೆ ಎಂದು ತಿಳಿಸಿದ ಅವರು, ಕಳೆದ ಬಜೆಟ್‌ನಲ್ಲೇ ಈ ಯೋಜನೆಗಾಗಿ ಹಣ ಮೀಸಲಿಡಲಾಗಿದೆ. ಒಟ್ಟು 60 ಕೋಟಿ ರೂ. ಅನುದಾನ ಇಡಲಾಗಿದೆ ಎಂದು ಮಾಹಿತಿ ನೀಡಿದರು.