×
Ad

ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದ್ದ ಚೋರರು

Update: 2019-12-31 21:43 IST

ಬೆಂಗಳೂರು, ಡಿ.31: ರಸ್ತೆಯ ಟ್ರಾಫಿಕ್ ಸಿಗ್ನಲ್ ಕಂಬಗಳಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಕೋರಮಂಗಲ ಮುಖ್ಯರಸ್ತೆಯ ವಾಟರ್ ಟ್ಯಾಂಕ್ ಮತ್ತು ಬಿಡಿಎ ಜಂಕ್ಷನ್‌ಗಳಲ್ಲಿ ಘಟನೆ ನಡೆದಿದ್ದು, 18 ಸಾವಿರ ಮೌಲ್ಯದ ಬ್ಯಾಟರಿಗಳು ಕಳುವಾಗಿದೆ ಎಂದು ತಿಳಿದುಬಂದಿದೆ.

ಆಡುಗೋಡಿಯ ಪೊಲೀಸರು, ಶನಿವಾರ ರಾತ್ರಿ 10ಗಂಟೆಯ ವರೆಗೂ ಕೆಲಸ ನಿರ್ವಹಿಸಿ, ನಂತರ ರವಿವಾರ ಮುಂಜಾನೆ ಕರ್ತವ್ಯಕ್ಕೆ ಹಾಜರಾದಾಗ ಸಿಗ್ನಲ್ ಲೈಟ್‌ಗಳು ಕಾರ್ಯ ನಿರ್ವಹಿಸದೇ ಇರುವುದು ಗೊತ್ತಾಗಿದೆ. ಬಳಿಕ ಪರಿಶೀಲನೆ ನಡೆಸಿದಾಗ ಬ್ಯಾಟರಿ ಕಳವು ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News