×
Ad

ಅಜ್ಮೀರಾ ಗ್ರೂಪ್ಸ್ ವಂಚನೆ ಪ್ರಕರಣ: ನಿರ್ದೇಶಕನ ಬಂಧನ, ಪಿಸ್ತೂಲು ಜಪ್ತಿ

Update: 2019-12-31 21:54 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.31: ಅಜ್ಮೀರಾ ಗ್ರೂಪ್ಸ್ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನಿರ್ದೇಶಕನೋರ್ವನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಪಿಸ್ತೂಲು ಜಪ್ತಿ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.

ಬನ್ನೇರುಘಟ್ಟ ಮುಖ್ಯ ರಸ್ತೆಯ ತಿಲಕ್‌ನಗರ ನಿವಾಸಿ ತಬ್ರೇಝ್ ಬಂಧಿತ ನಿರ್ದೇಶಕ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ ಸಿಸಿಬಿ ಪೊಲೀಸರು, ಆರೋಪಿ ನಿವಾಸದ ಮೇಲೆ ದಾಳಿ ನಡೆಸಿದಾಗ ಪಿಸ್ತೂಲು ಇರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ತಬ್ರೇಝ್ ನನ್ನು ಬಂಧಿಸಿ, ಕೆಲವು ಮಹತ್ವದ ದಾಖಲೆಗಳು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News