ಹೊಸ ವರ್ಷದಿಂದಲೇ ರೈಲು ಸಂಚಾರ ಸಮಯ ಬದಲಾವಣೆ

Update: 2019-12-31 17:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.31: ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯವು ಹೊಸ ವರ್ಷದಿಂದಲೇ ಯಶವಂತಪುರದಿಂದ ವಿಜಯಪುರ ನಡುವಿನ ರೈಲು ಸಂಚಾರ ಸಮಯವನ್ನು ಬದಲಿಸಲಾಗಿದೆ.

ರೈಲು ಸಂಖ್ಯೆ 06541 ನಾಳೆ(ಜ.1) ಬೆಂಗಳೂರಿನ ಯಶವಂತಪುರದಿಂದ ರಾತ್ರಿ 10:30 ಕ್ಕೆ ಹೊರಟು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಪ್ಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ, ಕೊಪ್ಪಳ, ಗದಗ, ಮಲ್ಲಾಪುರ, ಹೊಳೆ ಆಲೂರು, ಬಾದಾಮಿ, ಗುಳೇದಗುಡ್ಡ ರೋಡ್, ಬಾಗಲಕೋಟೆ, ಆಲಮಟ್ಟಿ, ಬಸವನಬಾಗೇವಾಡಿ ಮೂಲಕ ವಿಜಯಪುರಕ್ಕೆ ಮರುದಿನ ಮಧ್ಯಾಹ್ನ 2.10 ಕ್ಕೆ ತಲುಪಲಿದೆ.

ಅದೇ ರೀತಿ ಜ.2 ರಂದು 06542 ನಂಬರ್ ರೈಲು ವಿಜಯಪುರದಿಂದ ಬೆಳಗ್ಗೆ 6.30 ಕ್ಕೆ ಹೊರಟು, ರಾತ್ರಿ 10.20 ಕ್ಕೆ ಯಶವಂತಪುರಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News